ಮನೆತುಂಬಾ ಮಕ್ಕಳು ಮಾಡ್ಕೊಳಿ ಎಂದ ಪ್ರಧಾನಿ

geetha

ಶುಕ್ರವಾರ, 9 ಫೆಬ್ರವರಿ 2024 (18:35 IST)
Lee Hsein
ಸಿಂಗಪುರ : ಫೆ -10 ಮತ್ತು ಫೆ 11 ರಂದು ಚೈನೀಸ್ ಕ್ಯಾಲಂಡರ್‌ ಪ್ರಕಾರ ಹೊಸ ವರ್ಷವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದರು. ದೇಶದಲ್ಲಿ ಜನನ ಪ್ರಮಾಣ ತೀವ್ರವಾಗಿ ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸಿಂಗಪುರ್‌ ಪ್ರಧಾನಿ ಲೀ ಹೈನ್‌ ಲುಂಗ್‌  ಹೆಚ್ಚು ಮಕ್ಕಳನ್ನು ಹೊಂದುವಂತೆ ನವದಂಪತಿಗಳಿಗೆ ಕರೆ ನೀಡಿದ್ದಾರೆ.ಡ್ರ್ಯಾಗನ್‌ ಶಕ್ತಿ, ಸಾಮರ್ಥ್ಯ ಹಾಗೂ ಉತ್ತಮ ಭವಿಷ್ಯದ ಸಂಕೇತವಾಗಿದೆ ಎಂದು ನುಡಿದ ಲೀ, ಜೊತೆಗೆ ಮಕ್ಕಳನ್ನು ಪಡೆಯುವುದು ದಂಪತಿಗಳ ವೈಯಕ್ತಿಕ ವಿಚಾರವೂ ಆಗಿದೆ ಎಂದಿದ್ದಾರೆ. 

ನಿಮ್ಮ ಕುಟುಂಬಕ್ಕೆ ಒಂದು ಸಣ್ಣ ಡ್ರಾಗನ್‌ ಅನ್ನು ಸೇರಿಸಿಕೊಳ್ಲಲು ಇದು ಸದವಕಾಶವಾಗಿದೆ ಎಂದು ಹೊಸ ವರ್ಷದ ಸಂದೇಶ ನೀಡಿದ ಪ್ರಧಾನಿ ಮಗುವಿಗೆ ಜನ್ಮ ನೀಡುವುದು ಹಾಗೂ ಪೋಷಿಸುವುದು ಕುಟುಂಬದ ಅತ್ಯಂತ ಪ್ರಮುಖ ಸಂಗತಿಯಾಗಿದೆ ಎಂದರು. ಜೊತೆಗೆ ನನ್ನಂತಹ ಅಜ್ಜಂದಿರೂ  ಸಹ ಇದರಿಂದ ಖುಷಿ ಪಡುತ್ತಾರೆ ಎಂದು ಲೀ ಹೇಳಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ