ಯುವತಿಗೆ ಥಳಿಸಿ, ಕುತ್ತಿಗೆ ಹಿಡಿದು ಬಲವಂತವಾಗಿ ಕ್ಯಾಬ್ನಲ್ಲಿ ಕೂರಿಸಿದ ಯುವಕ ?

ಸೋಮವಾರ, 20 ಮಾರ್ಚ್ 2023 (10:58 IST)
ನವದೆಹಲಿ : ಯುವಕನೊಬ್ಬ ಯುವತಿಗೆ ಥಳಿಸಿ, ಕುತ್ತಿಗೆ ಹಿಡಿದು ಎಳೆದಾಡಿ ಆಕೆಯನ್ನ ಬಲವಂತವಾಗಿ ಕ್ಯಾಬ್ನಲ್ಲಿ ಕೂರಿಸಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದ್ದು, ವೀಡಿಯೋ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
 
ದೆಹಲಿಯ ಮಂಗೋಲ್ಪುರಿ ಪ್ರದೇಶದಲ್ಲಿ ಘಟನೆ ನಡೆದಿದ್ದು, ವೀಡಿಯೋ ಎಲ್ಲೆಡೆ ಹರಿದಾಡುತ್ತಿದೆ. ವೀಡಿಯೋವನ್ನ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಹಾಗೂ ದೆಹಲಿ ಪೊಲೀಸರಿಗೂ ಟ್ಯಾಗ್ ಮಾಡಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. 

ಈ ಘಟನೆ ಶನಿವಾರ ತಡರಾತ್ರಿ 11:30ರ ಸುಮಾರಿಗೆ ಗುರುಗ್ರಾಮ್ನ ಐಎಫ್ಎಫ್ಸಿಎಒ ಚೌಕ್ನಲ್ಲಿ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿ ಪೊಲೀಸರಿಗೆ ಲಭ್ಯವಾದ ಬಳಿಕ ತನಿಖೆಗೆ ಕೈಗೊಂಡಿದ್ದಾರೆ.

ಸದ್ಯ ದೆಹಲಿ ಪೊಲೀಸರು ಕ್ಯಾಬ್ ಮತ್ತು ಚಾಲಕನನ್ನು ಪತ್ತೆಹಚ್ಚಿದ್ದಾರೆ. ವೀಡಿಯೋದಲ್ಲಿ ಕಾಣುತ್ತಿರುವ ಇಬ್ಬರು ಯುವಕರು ಯುವತಿಯನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದರು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ