ಇಂದಿನಿಂದ ಟೊಯೋಟಾ ಇನ್ನೋವಾ ಬುಕ್ಕಿಂಗ್ ಸ್ಥಗಿತ!

ಭಾನುವಾರ, 9 ಏಪ್ರಿಲ್ 2023 (13:10 IST)
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪೆನಿಯು ಇನ್ನೋವಾ ಹೈಕ್ರಾಸ್ ಕಾರಿನ ZX ಮತ್ತು ZX(O) ಅವತರಣಿಕೆಗಳ ಬುಕ್ಕಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಪೂರೈಕೆ ಸವಾಲುಗಳ ಕಾರಣದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
 
ಹೈಕ್ರಾಸ್ನ ಇತರ ಅವತರಣಿಕೆಗಳ ಬುಕ್ಕಿಂಗ್ ಮುಂದುವರಿಯಲಿದೆ. ಟೊಯೋಟಾ ಇನ್ನೋವಾ ಹೈಕ್ರಾಸ್ VX, VX(O), ZX ಮತ್ತು ZX(O) ಅವತರಣಿಕೆಗಳು ಹೈಬ್ರಿಡ್ ಎಂಜಿನ್ ಹೊಂದಿದ್ದು ಗ್ರಾಹಕರಿಂದ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ 23.24 ಕಿಲೋಮೀಟರ್ ಮೈಲೇಜ್.  ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಕಾರು TNGA ಹೈಬ್ರಿಡ್ ಪೆಟ್ರೋಲ್ ಎಂಜಿನ್ ಮತ್ತು E-ಡ್ರೈವ್ ಟ್ರಾನ್ಸ್ಮಿಷನ್ ಹೊಂದಿದೆ.

ಈ ಕಾರಿನಲ್ಲಿ ಟೊಯೋಟಾದ 5ನೇ ತಲೆಮಾರಿನ ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಎಲೆಕ್ಟ್ರಿಕ್ ತಂತ್ರಜ್ಞಾನವನ್ನು ಬಳಸಲಾಗಿದೆ. ಹೈಕ್ರಾಸ್ನ ಪ್ರಮುಖ ಆಕರ್ಷಣೆ ಎಂದರೆ ಪ್ಯಾನರೋಮಿಕ್ ಸನ್ರೂಫ್. ಡೈನಾಮಿಕ್ ರಾಡಾರ್ ಕ್ರೂಸ್ ಕಂಟ್ರೋಲ್, ಲೇನ್ ಟ್ರೇಸ್ ಅಸಿಸ್ಟ್, ಸೇರಿದಂತೆ ಬಹಳಷ್ಟು ವೈಶಿಷ್ಟ್ಯಗಳನ್ನು ಹೈಕ್ರಾಸ್ ಹೊಂದಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ