ಜೈಪುರ : ನಾವು ರಾಮನ ಮಗ ಕುಶನ ವಂಶಸ್ಥರು” ಎಂದು ಜೈಪುರ ರಾಜವಂಶದ ಕುಡಿ, ಬಿಜೆಪಿ ಸಂಸದೆ ದಿಯಾ ಕುಮಾರಿ ಹೇಳಿಕೊಂಡಿದ್ದಾರೆ.
ಅಯೋಧ್ಯೆ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಶ್ರೀರಾಮನ ವಂಶದವರು ಯಾರಾದರೂ ಈಗಲೂ ಇದ್ದಾರೆಯೇ ಎಂದು ವಕೀಲರಿಗೆ ಪ್ರಶ್ನಿಸಿದ್ದರು. ಇದಕ್ಕೆ ವಕೀಲರು , “ಈ ಬಗ್ಗೆ ನನಗೆ ಮಾಹಿತಿ ಇಲ್ಲ; ಪತ್ತೆ ಮಾಡುತ್ತೇನೆ" ಎಂದು ಹೇಳಿದ್ದರು.
ಆದರೆ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ದಿಯಾ ಕುಮಾರಿ, ಶ್ರೀರಾಮನ ವಂಶಸ್ಥರು ಜಗತ್ತಿನ ಎಲ್ಲೆಡೆ ಇದ್ದಾರೆ. ಜೈಪುರದ ಹಿಂದಿನ ರಾಜ ಮತ್ತು ನಂತರದ ಭವಾನಿ ಸಿಂಗ್, ಶ್ರೀರಾಮನ ಪುತ್ರ ಕುಶನ 309 ನೇ ತಲೆಮಾರಿನವರು. ಆದ್ದರಿಂದ ಅಯೋಧ್ಯೆ ವಿವಾದವನ್ನು ಶೀಘ್ರವಾಗಿ ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ.