ಭೋಪಾಲ್ : ಉತ್ತರ ಪ್ರದೇಶದ ಯುವತಿಯೊಬ್ಬಳು ತನ್ನ ಮದುವೆ ಆಮಂತ್ರಣ ಪತ್ರಿಕೆಗಳನ್ನು ಹಂಚಲು ಹೋಗುತ್ತಿದ್ದಾಗ ಆಕೆಯನ್ನು ಅಪಹರಿಸಿ,
ಮೂವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರಗೈದು ಅವಳನ್ನು ಮಾರಾಟ ಮಾಡಿದ ಘಟನೆ ಮಧ್ಯಪ್ರದೇಶದ ಪಕ್ಕದ ದಾತಿಯಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಏಪ್ರಿಲ್ 21 ರಂದು ನಡೆಯಲಿರುವ ಆಕೆಯ ಮದುವೆಯ ಕಾರ್ಡ್ಗಳನ್ನು ವಿತರಿಸಲು ಹೋದಾಗ ಗ್ರಾಮದ ಮೂವರು ಯುವಕರು ಏಪ್ರಿಲ್ 18 ರಂದು ಅವಳನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರಗೈದಿದ್ದಾರೆ.
ಅಲ್ಲದೇ ರಾಜಕೀಯ ಪಕ್ಷದ ನಾಯಕರೊಬ್ಬರ ಬಳಿಗೆ ಕರೆದೊಯ್ದು ಅವರೊಂದಿಗೆ ಇರಿಸಿದಲ್ಲದೇ ಬಳಿಕ ಆಕೆಯನ್ನು ಮತ್ತೊಬ್ಬ ವ್ಯಕ್ತಿಯೊಂದಿಗೆ ಇರಲು ಒತ್ತಾಯಿಸಿದ್ದರು ಎಂದು ಯುವತಿಯು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.
ಕೆಲವು ದಿನಗಳ ಕಾಲ ಸಂತ್ರಸ್ತೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ಇಟ್ಟುಕೊಂಡಿದ್ದರು. ನಂತರದಲ್ಲಿ ಆಕೆಯನ್ನು ರಾಜಕೀಯ ಪಕ್ಷದ ನಾಯಕನಿಗೆ ಒಪ್ಪಿಸಿದ್ದಾರೆ. ನಾಯಕನೊಂದಿಗೆ 5 ದಿನಗಳ ಕಾಲ ಝಾನ್ಸಿ ಜಿಲ್ಲೆಯಲ್ಲಿ ಇರಿಸಿದ್ದಲ್ಲದೇ, ಬಳಿಕ ಯುವತಿಯನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಇರಲು ಒತ್ತಾಯಿಸಿ ಮಧ್ಯಪ್ರದೇಶದ ಪಕ್ಕದ ದಾತಿಯಾ ಜಿಲ್ಲೆಯ ಹಳ್ಳಿಗೆ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.