ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನ: ಕಳೆದ ಎರಡು ಚುನಾವಣೆ ಬಳಿಕ ಮೋದಿ ಹೋದ ಸ್ಥಳಗಳು ಯಾವುವು
ಈ ಧ್ಯಾನ ಮಂಟಪದಲ್ಲಿ ಹಿಂದೆ ವಿವೇಕಾನಂದರು ಧ್ಯಾನ ಮಾಡಿ ಅಭಿವೃದ್ಧಿ ಹೊಂದಿದ ಭಾರತದ ಬಗ್ಗೆ ಕನಸು ಕಂಡಿದ್ದರು. ದೇಶದಾದ್ಯಂತ ಸಂಚರಿಸಿದ ನಂತರ ವಿವೇಕಾನಂದರು ಮೂರು ದಿನ ಇಲ್ಲಿ ತಪಸ್ಸು ಮಾಡಿದರು. ಈಗ ಮೋದಿ ಅದೇ ಸ್ಥಳದಲ್ಲಿ ಧ್ಯಾನಕ್ಕೆ ಕೂರಲಿದ್ದಾರೆ.
ಅಂದ ಹಾಗೆ, ಮೋದಿ ಈ ರೀತಿ ಚುನಾವಣೆ ಮುಗಿದ ಬಳಿಕ ಧ್ಯಾನಸ್ಥರಾಗುವುದು ಇದೇ ಮೊದಲಲ್ಲ. ಈ ಮೊದಲು 2014 ಮತ್ತು 2019 ರ ಚುನಾವಣೆ ಪ್ರಕ್ರಿಯೆಗಳು ಮುಗಿದ ಬಳಿಕ, ಫಲಿತಾಂಶಕ್ಕೆ ಮುನ್ನವೂ ಈ ರೀತಿ ಧ್ಯಾನ ಮಾಡಿದ್ದರು.
2014 ರಲ್ಲಿ ಚುನಾವಣೆ ಮುಗಿದ ಬಳಿಕ ಮೋದಿ ಶಿವಾಜಿಯ ಪ್ರತಾಪಘಡಕ್ಕೆ ತೆರಳಿ ಎರಡು ದಿನ ಧ್ಯಾನ ಮಾಡಿದ್ದರು. 2019 ರಲ್ಲಿ ಚುನಾವಣೆ ಮುಗಿದ ಬಳಿಕ ಕೇದರನಾಥ ಗುಹೆಯಲ್ಲಿ ಧ್ಯಾನಸ್ಥರಾಗಿ ಕೂತಿದ್ದರು. ಇದೀಗ ಈ ಬಾರಿ ಕನ್ಯಾಕುಮಾರಿಯಲ್ಲಿ ಧ್ಯಾನ ಮಾಡಲಿದ್ದಾರೆ.