ಗೆದ್ದ ಮೂರು ದಿನದಲ್ಲಿ ಪ್ರಧಾನಿ ಯಾರೆಂದು ಘೋಷಣೆ ಮಾಡುತ್ತೇವೆ: ಜೈ ರಾಂ ರಮೇಶ್

Krishnaveni K

ಶನಿವಾರ, 25 ಮೇ 2024 (12:07 IST)
ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಗೆಲುವು ಸಾಧಿಸಿದ ಮೂರೇ ದಿನಗಳಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂದು ಘೋಷಣೆ ಮಾಡಲಿದ್ದೇವೆ ಎಂದು ಕಾಂಗ್ರೆಸ್ ನಾಯಕ ಜೈ ರಾಂ ರಮೇಶ್ ಹೇಳಿದ್ದಾರೆ.
 

ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎಂದು ಪ್ರಶ್ನೆ ಮಾಡುತ್ತಲೇ ಇವೆ. ಒಂದು ವೇಳೆ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಪ್ರಧಾನಿ ಕುರ್ಚಿಗಾಗಿಯೇ ಹೋರಾಟ ನಡೆಯಲಿದೆ ಎಂದು ಲೇವಡಿ ಮಾಡುತ್ತಿವೆ.

ಇದರ ಬೆನ್ನಲ್ಲೇ ಜೈಂ ರಾಂ ರಮೇಶ್ ಇದೊಂದು ಸಮಸ್ಯೆಯೇ ಅಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಇಂಡಿಯಾ ಒಕ್ಕೂಟಕ್ಕೆ ಈಗಾಗಲೇ ಜನಾದೇಶ ಸಿಕ್ಕಿದೆ. ಇದು ಪ್ರಧಾನಿ ಮೋದಿ ಮತ್ತು ಬಿಜೆಪಿ ಭಯಕ್ಕೆ ಕಾರಣವಾಗಿದೆ. ಇದಕ್ಕಾಗಿ ಅವರು ಕೋಮುವಾದ ಎಳೆದು ತರುತ್ತಿದ್ದಾರೆ. ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದ ಮೂರೇ ದಿನದಲ್ಲಿ ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡಲಾಗುವುದು ಎಂದಿದ್ದಾರೆ.

ಈ ಮೊದಲು 2004 ರಲ್ಲಿ ಚುನಾವಣೆ ಫಲಿತಾಂಶ ಬಂದ ಮೂರು ದಿನದಲ್ಲಿ ಪ್ರಧಾನಿ ಘೋಷಣೆ ಮಾಡುತ್ತೇವೆ ಎಂದು ಯುಪಿಎ ಹೇಳಿತ್ತು. ಅದರಂತೆ ಮನಮೋಹನ್ ಸಿಂಗ್ ರನ್ನು ಪ್ರಧಾನಿ ಎಂದು ಘೋಷಣೆ ಮಾಡಲಾಗಿತ್ತು. ಈಗಲೂ ಅದೇ ರೀತಿ ಘೋಷಣೆ ಮಾಡುತ್ತೇವೆ. ಅಂದು ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬಂದು ಇಂದೂ ಅಧಿಕಾರಕ್ಕೆ ಬರಲಿದೆ ಎಂದು ಜೈರಾಂ ರಮೇಶ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ