ಖಾಸಗಿ ಶಾಲೆಗಳ ಒಕ್ಕೂಟಗಳ ಪ್ರತಿಭಟನೆ ಬಗ್ಗೆ ಶಿಕ್ಷಣ ಸಚಿವರು ಹೇಳಿದ್ದೇನು?

ಬುಧವಾರ, 10 ಫೆಬ್ರವರಿ 2021 (12:05 IST)
ಬೆಂಗಳೂರು : ಶೇ.30ರಷ್ಟು ಶುಲ್ಕ ಕಡಿತ ವಾಪಾಸ್ ಗೆ ಆಗ್ರಹಿಸಿ ಫೆ.23ಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ಪ್ರತಿಭಟನೆ ನಡೆಸಲು ನಿರ್ಧರಿಸಿವೆ.

ಈ ಕುರಿತು ಪ್ರತಿಕ್ರಿಯಿಸಿದ ಶಿಕ್ಷಣಸಚಿವ ಸುರೇಶ್ ಕುಮಾರ್,  ಖಾಸಗಿ ಶಾಲೆಗಳ ಶುಲ್ಕವನ್ನು ಏಕಾಏಕಿ ಕಡಿಮೆ ಮಾಡಿಲ್ಲ ಖಾಸಗಿ ಶಾಲೆಗಳ ಸಂಘಟನೆಗಳ ಜತೆ ನಾವು ಚರ್ಚಿಸಿದ್ದೇವೆ. ಹಲವು ಬಾರಿ ಚರ್ಚಿಸಿದ ಬಳಿಕ ನಿರ್ಧಾರ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಈಗ ಖಾಸಗಿ ಶಾಲೆಗಳು , ಪೋಷಕರು ಕುಳಿತು ಚರ್ಚೆ ಮಾಡಲಿ.  ಹೋರಾಟ ಒಂದೇ ಪರಿಹಾರವಲ್ಲ. ಖಾಸಗಿ ಶಾಲೆಗಳ ಒಕ್ಕೂಟಕ್ಕೂ ಮನವಿ ಮಾಡುತ್ತೇನೆ. ವಿದ್ಯಾರ್ಥಿಗಳ ಹಿತ ನಮಗೆ ಮೊದಲ ಆದ್ಯತೆಯಾಗಬೇಕು ಎಂದು ಶಿಕ್ಷಣಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ