ಪ್ರಧಾನಿ ಮೋದಿ ಫಿಟ್ನೆಸ್ ಗುಟ್ಟು ಏನು ಗೊತ್ತಾ?
ಬ್ರಿಟನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ವೆಸ್ಟ್ ಮಿನಿಸ್ಟರ್ ಸೆಂಟ್ರಲ್ ಹಾಲ್ ನಲ್ಲಿ ಸಂವಾದ ಕಾರ್ಯಕ್ರಮದ ವೇಳೆ ತಮ್ಮ ಫಿಟ್ ನೆಸ್ ರಹಸ್ಯ ಬಹಿರಂಗಪಡಿಸಿದ್ದಾರೆ.
‘ಕಳೆದ 20 ವರ್ಷಗಳಿಂದ ನಾನು ವಿಶೇಷ ಡಯಟ್ ನಲ್ಲಿದ್ದೇನೆ. ಪ್ರತಿ ನಿತ್ಯ 2 ಕಿಲೋದಷ್ಟು ಟೀಕೆ ಎದುರಿಸುತ್ತೇನೆ. ಅದುವೇ ನನ್ನ ಫಿಟ್ ನೆಸ್ ನ ರಹಸ್ಯ’ ಎಂದು ಪ್ರಧಾನಿ ಮೋದಿ ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಟೀಕೆಯನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸುತ್ತೇನೆ. ಇದರಿಂದಾಗಿಯೇ ಬೆಳೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.