ಸ್ನೇಹಿತನ ಮಗಳ ಹುಟ್ಟುಹಬ್ಬದ ಪಾರ್ಟಿಗೆ ಬಂದವರು 2 ವರ್ಷದ ಮಗುವನ್ನು ಹುರಿದು ಮುಕ್ಕಿದರು
ಶುಕ್ರವಾರ, 2 ಅಕ್ಟೋಬರ್ 2020 (11:17 IST)
ಜಬಲ್ಪುರ : ಹುಟ್ಟುಹಬ್ಬದ ಪಾರ್ಟಿಗೆಂದು ಬಂದ ಇಬ್ಬರು ವ್ಯಕ್ತಿಗಳು ಮದ್ಯದ ಅಮಲಿನಲ್ಲಿ 2 ವರ್ಷದ ಬಾಲಕಿಯನ್ನು ಅಪಹರಿಸಿ ಮಾನಭಂಗ ಎಸಗಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಶಹಪುರದ ಪಾಥಾರ್ ಗ್ರಾಮದಲ್ಲಿ ನಡೆದಿದೆ.
ಸೋನು ಮತ್ತು ಶುಭಮ್ ಇಂತಹ ಕೃತ್ಯ ಎಸಗಿದ ಪಾಪಿಗಳು. ಇವರು ತಮ್ಮ ಸ್ನೇಹಿತನ ಮಗಳ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದರು. ಆ ವೇಳೆ ಕಂಠಪೂರ್ತಿ ಕುಡಿದ ಅವರು ಅಲ್ಲಿ ಮಲಗಿದ್ದ 2 ವರ್ಷದ ಬಾಲಕಿಯನ್ನು ಅಪಹರಿಸಿ ಮಾನಭಂಗ ಎಸಗಿ ಬಳಿಕ ಆಕೆಯ ಉಸಿರುಗಟ್ಟಿಸಿ ಸಾಯಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ ಪೊಲೀಸರು ಶ್ವಾನದಳವನ್ನು ಬಳಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ ಎನ್ನಲಾಗಿದೆ.