ವ್ಯಾಟ್ಸಪ್ ನಲ್ಲಿ ಇಂತಹದ್ದೊಂದು ಸಂದೇಶ ಬಂದಿದೆಯೇ? ಹಾಗಿದ್ದರೆ ಭಯಬೇಡ
ಸೋಮವಾರ, 18 ಜನವರಿ 2021 (08:11 IST)
ಬೆಂಗಳೂರು: ಇತ್ತೀಚೆಗೆ ವ್ಯಾಟ್ಸಪ್ ನಿಮ್ಮ ಖಾಸಗಿ ಮಾಹಿತಿಗಳನ್ನು ಸೋರಿಕೆ ಮಾಡಲಿದೆ ಎಂಬಿತ್ಯಾದಿ ಸುದ್ದಿಗಳು ಓಡಾಡಿದ್ದವು. ಇದರಿಂದಾಗಿ ವ್ಯಾಟ್ಸಪ್ ಬಳಕೆ ಬಗ್ಗೆ ಜನರಲ್ಲಿ ಭೀತಿ ಮನೆ ಮಾಡಿತ್ತು. ಇದಕ್ಕೀಗ ಸ್ವತಃ ವ್ಯಾಟ್ಸಪ್ ಸ್ಪಷ್ಟನೆ ನೀಡಿದೆ.
ಬಳಕೆದಾರರ ಮೊಬೈಲ್ ಸಂಖ್ಯೆಗೆ ಸ್ಟೇಟಸ್ ಕಳುಹಿಸಿರುವ ವ್ಯಾಟ್ಸಪ್ ಸಂಸ್ಥೆ ಈ ಸಾಮಾಜಿಕ ಜಾಲತಾಣ ಸಂಪೂರ್ಣ ಸುರಕ್ಷಿತ ಎಂದಿದೆ. ನಿಮ್ಮ ಯಾವುದೇ ವೈಯಕ್ತಿಕ ಸಂದೇಶಗಳು, ಕರೆಗಳನ್ನು ನಾವು ಕದ್ದು ಕೇಳಿಸಿಕೊಳ್ಳುವುದಿಲ್ಲ. ನಿಮ್ಮ ಮಾಹಿತಿಗಳನ್ನು ಫೇಸ್ ಬುಕ್ ಜೊತೆಗೆ ಹಂಚಿಕೊಳ್ಳುವುದಿಲ್ಲ. ವ್ಯಾಟ್ಸಪ್ ಬಳಕೆದಾರರಿಗೆ ಸಂಪೂರ್ಣವಾಗಿ ಸುರಕ್ಷಿತವಾಗಿರಲಿದೆ ಎಂದು ಸಂದೇಶ ನೀಡಿದೆ.