ವಿಶ್ವ ಆರೋಗ್ಯ ಸಂಸ್ಥೆ ಭಾರತದ ವಿರೋಧ ಯಾಕೆ?

ಶನಿವಾರ, 30 ಏಪ್ರಿಲ್ 2022 (10:34 IST)
ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಅಸ್ಪಷ್ಟ ವರದಿಯನ್ನು ಸದಸ್ಯ ರಾಷ್ಟ್ರಗಳು ಒಪ್ಪಿಕೊಳ್ಳಲೇಬೇಕು ಅನ್ನೋದು ತಪ್ಪು ಎಂದು ಭಾರತ ಹೇಳಿದೆ.

ವರದಿಯಲ್ಲಿ ಸತ್ಯಾಸತ್ಯತೆ ಇಲ್ಲ.ವರದಿ ತಯಾರಿಸಿದ ವಿಧಾನ ಸರಿ ಇಲ್ಲ. ಅಸ್ಪಷ್ಟ ವರದಿಯನ್ನು ಭಾರತ ಅಕ್ಷೇಪಿಸುತ್ತದೆ ಎಂದಿದೆ.  ಜಗತ್ತಿನಲ್ಲಿ ಕೊರೋನಾ ಸೋಂಕಿನಿಂದ 2021ರ ಅಂತ್ಯದ ವೇಳೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆಯನ್ನು ಬಿಡುಗಡೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮುಂದಾಗಿದ್ದು,

ಅದಕ್ಕೆ ಭಾರತ ವಿರೋಧ ವ್ಯಕ್ತಪಡಿಸಿದೆ ಎಂದು ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ವಿವಿಧ ದೇಶಗಳು ನೀಡಿರುವ ಅಂಕಿಅಂಶಗಳ ಪ್ರಕಾರ ಜಗತ್ತಿನಲ್ಲಿ ಕೊರೋನಾದಿಂದ 2021ರ ಅಂತ್ಯಕ್ಕೆ 60 ಲಕ್ಷ ಜನರು ಸಾವನ್ನಪ್ಪಿದ್ದಾರೆ.

ಆದರೆ, ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಹಾಗೂ ಜಾಗತಿಕ ಮಟ್ಟದ ಕೆಲ ಗಣಿತಜ್ಞರು ಹೊಸ ವಿಧಾನದ ಮೂಲಕ ಜಗತ್ತಿನಲ್ಲಿ ಸಂಭವಿಸಿದ ಕೋವಿಡ್ ಸಾವಿನ ವರದಿ ಸಿದ್ಧಪಡಿಸಿದ್ದು, ಅದರಲ್ಲಿ 1.5 ಕೋಟಿ ಜನರು ಸಾವನ್ನಪ್ಪಿದ್ದಾರೆ ಎಂಬ ಫಲಿತಾಂಶ ಬಂದಿದೆ.

ಈ ವರದಿಯಲ್ಲಿ ಭಾರತವೊಂದರಲ್ಲೇ 40 ಲಕ್ಷ ಜನರು ಕೊರೋನಾಕ್ಕೆ ಬಲಿಯಾಗಿದ್ದಾರೆ ಎಂದು ನಮೂದಿಸಲಾಗಿದೆ ಎಂದು ಭಾರತಕ್ಕೆ ತಿಳಿದುಬಂದಿದೆ. ಆದರೆ, ಭಾರತ ಸರ್ಕಾರದ ಅಂಕಿಅಂಶಗಳ ಪ್ರಕಾರ ಇಲ್ಲಿ 5.2 ಲಕ್ಷ ಜನರು ಕೊರೋನಾದಿಂದ ಸಾವನ್ನಪ್ಪಿದ್ದಾರೆ.

ಹೀಗಾಗಿ ಲೆಕ್ಕಾಚಾರಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಬಳಸಿದ ವಿಧಾನವೇ ತಪ್ಪಾಗಿದೆ ಎಂದು ಭಾರತ ಸರ್ಕಾರ ಆಕ್ಷೇಪಿಸಿದೆ. ಆ ಕಾರಣದಿಂದ ನಾಲ್ಕು ತಿಂಗಳಿನಿಂದ ವರದಿ ಬಿಡುಗಡೆಯಾಗದೆ ಬಾಕಿಯುಳಿದಿದೆ ಎಂದು ಪತ್ರಿಕೆಯ ವರದಿ ತಿಳಿಸಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ