ಕೇಂದ್ರ, ರಾಜ್ಯದಲ್ಲಿ ನಮ್ಮ ಸರ್ಕಾರವಿದೆ ಬೆರಳು ತೋರಿಸಿದ್ರೆ ಕತ್ತರಿಸ್ತೇವೆ: ಬಿಜೆಪಿ

ಶುಕ್ರವಾರ, 29 ಮಾರ್ಚ್ 2019 (18:56 IST)
ಲಕ್ನೋ: ಬಿಜೆಪಿ ಪಕ್ಷ ಮತ್ತು ಬಿಜೆಪಿ ಸದಸ್ಯರ ವಿರುದ್ಧ ಯಾರಾದರೂ ಬೆರಳು ತೋರಿಸಿದಲ್ಲಿ ಕತ್ತರಿಸಿ ಹಾಕ್ತೇವೆ ಎಂದು ಪರಿಶಿಷ್ಟ ಜಾತಿ ರಾಷ್ಟ್ರೀಯ ಆಯೋಗದ ಮುಖ್ಯಸ್ಥ, ಬಿಜೆಪಿ ಅಭ್ಯರ್ಥಿ ರಾಮ್ ಶಂಕರ್ ಕಠಾರಿಯಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ನಮ್ಮ ಸರಕಾರವಿದೆ. ಆದ್ದರಿಂದ,ಯಾರಾದರೂ ನಮ್ಮ ವಿರುದ್ಧ ಬೆರಳು ತೋರಿಸಿದರೆ ಬೆರಳು ಮುರಿದು ಹಾಕ್ತೇವೆ ಎಂದು ಗುಡುಗಿದ್ದಾರೆ.
 
ಹಿಂದೆ ಮಾಯಾವತಿ ಸರಕಾರವಿದ್ದಾಗ ನನ್ನ ವಿರುದ್ಧ 29 ಕೇಸ್‌ಗಳನ್ನು ದಾಖಲಿಸಿದ್ದಾರೆ. ನಾನು ಎಲ್ಲಾ ಕೇಸ್‌ಗಳ ವಿರುದ್ಧ ಹೋರಾಡಿದ್ದೇನೆ. ಮಾಯಾವತಿಗೆ ನನ್ನನ್ನು ಜೈಲಿಗೆ ತಳ್ಳಲು ಸಾಧ್ಯವಾಗಿಲ್ಲ ಎಂದು ವ್ಯಂಗ್ಯವಾಡಿದರು.
 
ಮಾಯಾವತಿ ಮುಖ್ಯಮಂತ್ರಿಯಾಗಿದ್ದಾಗ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಹೋರಾಟ ಮಾಡಿದ್ದೇನೆ. ನಮ್ಮ ವಿರುದ್ಧ ಯಾವ ರೀತಿ ವರ್ತಿಸುತ್ತೀರೋ ಅದೇ ರೀತಿ ನಾವು ವರ್ತಿಸುತ್ತೇವೆ. ನಾನು ನಿಮ್ಮ ಜತೆ ಯಾವಾಗಲೂ ಇರುತ್ತೇನೆ ಎಂದು ಬಿಜೆಪಿ ಸದಸ್ಯರಿಗೆ ಬಿಜೆಪಿ ಅಭ್ಯರ್ಥಿ ರಾಮ್ ಶಂಕರ್ ಕಠಾರಿಯಾ ಭರವಸೆ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ