28 ವರ್ಷಗಳ ಬಳಿಕ ಅತ್ಯಾಚಾರವಾಗಿದೆಯೆಂದು ದೂರು ಕೊಟ್ಟ ಮಹಿಳೆ
35 ವರ್ಷದ ಮಹಿಳೆ ತನ್ನ ಮೇಲೆ 7 ನೇ ವರ್ಷದಲ್ಲಿ ಲೈಂಗಿಕ ದೌರ್ಜನ್ಯವಾಗಿತ್ತೆಂದು ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಆಕೆಯ ಪತಿ, ಮಾಜಿ ಯೋಧ ಬೆಂಬಲಿಸಿದ್ದರಿಂದ ದೂರು ನೀಡಿದ್ದಾಳಂತೆ.
ಮೊದಲು ಮಹಿಳೆಯ ದೂರು ಸ್ವೀಕರಿಸಲು ಪೊಲೀಸರು ಹಿಂಜರಿದಿದ್ದರು. ಆದರೆ ಬಳಿಕ ಸಂತ್ರಸ್ತೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಬಳಿಕ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.