ಚಿನ್ನದ ತಟ್ಟೆಯಲ್ಲಿಯೇ ನಮ್ಮ ಭೋಜನ ಎಂದ ಯಶೋಧರಾ ಸಿಂಧಿಯಾ

ಮಂಗಳವಾರ, 12 ಡಿಸೆಂಬರ್ 2023 (12:33 IST)
ನಾವು ಚಿಕ್ಕವರಾಗಿದ್ದಾಗ ಹುಟ್ಟು ಹಬ್ಬ ಅಥವಾ ವಿಶೇಷ ದಿನಗಳ ಸಂದರ್ಭಗಳಲ್ಲಿ ಚಿನ್ನ ಮತ್ತು ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುತ್ತಿದ್ದೇವು. ಇದೊಂದು ರಾಜಮನೆತನದ ಸಂಪ್ರದಾಯ. ನನಗೆ ಮದುವೆಯಾದಾಗ 6 ಚಿನ್ನದ ತಟ್ಟೆಗಳು ಮತ್ತು ಬೆಳ್ಳಿ ತಟ್ಟೆಗಳನ್ನು ನೀಡಲಾಗಿತ್ತು. ನಾವು ರಾಜಮನೆತನದವರು ಎಂದು ನಿಮಗೆ ಗೊತ್ತಿಲ್ಲವೇ ಎಂದು ಬಿಜೆಪಿ ನಾಯಕಿ ಯಶೋಧರಾ ಸಿಂಧಿಯಾ ಮಾಧ್ಯಮದವರಿಗೆ ತಿರುಗೇಟು ನೀಡಿದ್ದಾರೆ.
 
ಕಳೆದ ತಿಂಗಳು ಚುನಾವಣೆ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ 1.5 ಕೋಟಿ ರೂ.ಬೆಲೆಬಾಳುವ ಟೀ ಸೆಟ್‌ ನಮೂದಿಸಿ ಅಚ್ಚರಿ ಮೂಡಿಸಿದ್ದರು. ಇದೀಗ 1.5 ಕೋಟಿ ರೂಪಾಯಿ ಏನ್ ಮಹಾ? ನಮ್ಮದು ರಾಜಮನೆತನ ಕಣ್ರೀ ಎಂದು  ಸಮರ್ಥಿಸಿಕೊಂಡಿದ್ದಾರೆ.
 
ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಗ್ವಾಲಿಯರ್‌ನ ಸಂಸದೆಯಾದ ಯಶೋಧರಾ ಸಿಂಧಿಯಾ, ಬೆಲೆಬಾಳುವ ಟೀ ಸೆಟ್ ಹೊಂದಿರುವುದರಲ್ಲಿ ಯಾವುದೇ ತಪ್ಪಿಲ್ಲ. ರಾಜಮನೆತನ ಶ್ರೀಮಂತಿಕೆಯ ಒಂದು ಭಾಗವಷ್ಟೆ ಎಂದು ನುಲಿದಿದ್ದಾರೆ.
 
ಶ್ರೀಮಂತ ಅಭ್ಯರ್ಥಿಗಳು ಚುನಾವಣೆಹೆ ಸ್ಪರ್ಧಿಸುವುದರಲ್ಲಿ ಲಾಭವಿದೆ. ಯಾಕೆಂದರೆ ಅವರು ಭ್ರಷ್ಟರಾಗಿರುವುದಿಲ್ಲ. ನಾನಾಗಲಿ ಅಥವಾ ನನ್ನ ಸಹೋದರಿ ವಸುಂಧರ ರಾಜೇಯಾಗಲಿ ಮತ್ತು ನನ್ನ ಅಳಿಯ ಜ್ಯೋತೀರಾಧೀತ್ಯ ಸಿಂಧಿಯಾ ಲಂಚ ಸ್ವೀಕರಿಸುವುದಿಲ್ಲ ಎನ್ನುವುದು ಮತದಾರರಿಗೆ ಸ್ಪಷ್ಟವಾಗಿ ಗೊತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಯಶೋಧರಾ ಸಿಂಧಿಯಾ ವಿವರಣೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ