ದೆಹಲಿ: ಒಲಿಂಪಿಕ್ಸ್‌ನಲ್ಲಿ ಫೋಗಟ್ ಅವರ ಹಿನ್ನಡೆ ಖಂಡಿತವಾಗಿಯೂ ಲಕ್ಷಾಂತರ ಭಾರತೀಯರ ಭರವಸೆಯನ್ನು ಮುರಿದಿದೆ ಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಭೇಸರ ವ್ಯಕ್ತಪಡಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್ ಅನರ್ಹತೆ ಬಗ್ಗೆ ರಾಜಕೀಯ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.
50 ಕೆಜಿ ಮಹಿಳಾ ಕುಸ್ತಿ ಫೈನಲ್‌ನಿಂದ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹರಾಗಿರುವುದರಿಂದ ಭಾರತಕ್ಕೆ ದೊಡ್ಡ ಆಘಾತವಾಗಿದೆ. ವಿನೇಶ್ ಭಾರೀ ನಿರಾಸೆ ಅನುಭವಿಸಿದ ಬೆನ್ನಲ್ಲೇ ರಾಜಕೀಯ ಮುಖಂಡರು ಅವರಿಗೆ ಸಮಾಧಾನದ ಮಾತುಗಳನ್ನು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ 'ವಿನೇಶ್ ಫೋಗಟ್‌ಗೆ ತಮ್ಮ ಬೆಂಬಲವನ್ನು ನೀಡಿದರು ಮತ್ತು ಒಲಿಂಪಿಕ್ಸ್‌ನಲ್ಲಿ ಫೋಗಟ್ ಅವರ ಹಿನ್ನಡೆ ಖಂಡಿತವಾಗಿಯೂ ಲಕ್ಷಾಂತರ ಭಾರತೀಯರ ಭರವಸೆಯನ್ನು ಮುರಿದಿದೆ' ಎಂದು ಬೇಸರ ವ್ಯಕ್ತಪಡಿಸಿದರು. ಈ ಬಗ್ಗೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
"ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್ ಅವರ ಹಿನ್ನಡೆಯು ಲಕ್ಷಾಂತರ ಭಾರತೀಯರ ಭರವಸೆಯನ್ನು ಖಂಡಿತವಾಗಿಯೂ ಮುರಿದಿದೆ. ಅವರು ಅದ್ಭುತ ಕ್ರೀಡಾ ವೃತ್ತಿಜೀವನವನ್ನು ಹೊಂದಿದ್ದಾರೆ, ವಿಶ್ವ ಚಾಂಪಿಯನ್‌ನನ್ನು ಸೋಲಿಸಿದ ಕೀರ್ತಿಯೊಂದಿಗೆ ಮಿಂಚುತ್ತಿದ್ದಾರೆ. ಅವಳು ಯಾವಾಗಲೂ ವಿಜೇತಳಾಗಲು ಮತ್ತೆ ಪುಟಿದೇಳುತ್ತಾಳೆ, ನಮ್ಮ ಶುಭಾಶಯಗಳು ಮತ್ತು ಬೆಂಬಲ ಯಾವಾಗಲೂ ಅವಳೊಂದಿಗೆ ಇರುತ್ತದೆ" ಎಂದು ಅವರು ಬರೆದುಕೊಂಡಿದ್ದಾರೆ.
ಇಷ್ಟು ಚೆನ್ನಾಗಿ ಕುಸ್ತಿ ನಡೆಸಿ ಫೈನಲ್‌ಗೆ ಅರ್ಹತೆ ಪಡೆದ ನಂತರವೂ ವಿನೇಶ್ 100 ಗ್ರಾಂ ಅಧಿಕ ತೂಕ ಹೊಂದಿರುವ ಕಾರಣದಿಂದ ಅನರ್ಹಗೊಂಡಿರುವುದು ನಮ್ಮ ದೇಶದ ಅತ್ಯಂತ "ದುರದೃಷ್ಟಕರ" ಎಂದು ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಸಂಜಯ್ ಸಿಂಗ್ ಹೇಳಿದ್ದಾರೆ.
2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೋಗಟ್ ಅವರ ಅತ್ಯುತ್ತಮ ಪ್ರದರ್ಶನವು ಭಾರತವನ್ನು ಬೆಳಗಿಸಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.