ಚಲಿಸುವ ವ್ಯಾನ್ ನಲ್ಲಿ ಯುವತಿಯ ಶೀಲಹರಣ ಮಾಡಿದ ದುರುಳರು

ಸೋಮವಾರ, 7 ಡಿಸೆಂಬರ್ 2020 (09:18 IST)
ಲಕ್ನೋ: ಚಲಿಸುವ ವಾಹನದಲ್ಲಿ ತನ್ನ ಮೇಲೆ ಯುವಕರ ಗುಂಪೊಂದು ಮಾನಭಂಗ ಮಾಡಿ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದೆ ಎಂದು ಯುವತಿಯೊಬ್ಬಳು ದೂರಿದ್ದಾಳೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.


ಅಂಗಡಿಗೆ ತೆರಳುತ್ತಿದ್ದಾಗ 3-4 ಯವಕರ ಗುಂಪು ವ್ಯಾನ್ ನೊಳಗೆ ಬಲವಂತವಾಗಿ ತಳ್ಳಿ ಶೀಲಕೆಡಿಸಿದ್ದಾರೆ. ಅಷ್ಟೇ ಅಲ್ಲದೆ, ಅದರ ವಿಡಿಯೋ ಕೂಡಾ ಮಾಡಿದ್ದಾರೆ. ಒಂದು ವೇಳೆ ಈ ವಿಚಾರ ಬಹಿರಂಗಪಡಿಸಿದರೆ ಕುಟುಂಬಸ್ಥರಿಗೂ ತೊಂದರೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಇದೀಗ ಪ್ರಮುಖ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ