ರುಚಿಕರವಾದ ಟೇಸ್ಟಿ ಬೆಳ್ಳುಳ್ಳಿ ಚಿಕನ್ ರೈಸ್

ಶನಿವಾರ, 11 ಮಾರ್ಚ್ 2023 (15:38 IST)
ಬೆಳ್ಳುಳ್ಳಿಯಲ್ಲಿ ಅದೆಷ್ಟು ಆರೋಗ್ಯಕರ ಅಂಶಗಳಿವೆಯೋ ಅದನ್ನು ಅಡುಗೆಯಲ್ಲಿ ಬಳಸುವುದರಿಂದ ಅಷ್ಟೇ ರುಚಿಯನ್ನೂ ನೀಡುತ್ತದೆ. ನಾವಿಂದು ಬೆಳ್ಳುಳ್ಳಿ ಚಿಕನ್ ರೈಸ್ ರೆಸಿಪಿಯನ್ನು ಹೇಳಿಕೊಡುತ್ತೇವೆ. ಸಿಂಪಲ್ ವಿಧಾನವನ್ನು ನೀವು ಕೂಡಾ ಈ ವೀಕೆಂಡ್ನಲ್ಲಿ ಒಮ್ಮೆ ಮಾಡಿ ನೋಡಿ.
 
ಬೇಕಾಗುವ ಪದಾರ್ಥಗಳು

ಹೆಚ್ಚಿದ ಈರುಳ್ಳಿ – ಕಾಲು ಕಪ್
ಹೆಚ್ಚಿದ ಕ್ಯಾಪ್ಸಿಕಮ್ – ಅರ್ಧ ಕಪ್
ಜಜ್ಜಿದ ಬೆಳ್ಳುಳ್ಳಿ – 4 ಎಸಳು
ಅಕ್ಕಿ – ಅರ್ಧ ಕಪ್
ಎಣ್ಣೆ – 2 ಟೀಸ್ಪೂನ್
ನಿಂಬೆ ರಸ – ಕಾಲು ಕಪ್
ಕತ್ತರಿಸಿದ ಚಿಕನ್ ಬ್ರೆಸ್ಟ್ – 1
ಶುಂಠಿ ಪೇಸ್ಟ್ – 2 ಟೀಸ್ಪೂನ್
ಸೋಯಾ ಸಾಸ್ – 2 ಟೀಸ್ಪೂನ್
ಜೇನು – 1 ಟೀಸ್ಪೂನ್
ಬೇಯಿಸಿದ ಚಿಕನ್ ಸ್ಟಾಕ್ – ಅರ್ಧ ಕಪ್
ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು 

ಮಾಡುವ ವಿಧಾನ

* ಮೊದಲಿಗೆ ಒಂದು ದೊಡ್ಡ ಪಾತ್ರೆ ತೆಗೆದುಕೊಂಡು, ಅದರಲ್ಲಿ ಚಿಕನ್ ತುಂಡುಗಳು, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಎಣ್ಣೆ, ಉಪ್ಪು ಮತ್ತು ನಿಂಬೆ ರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ಸುಮಾರು 1 ಗಂಟೆ ಮ್ಯಾರಿನೇಟ್ ಆಗಲು ಪಕ್ಕಕ್ಕಿಡಿ.
* ಬಳಿಕ ಕುಕ್ಕರ್ ತೆಗೆದುಕೊಂಡು, ಅದರಲ್ಲಿ ಅಕ್ಕಿ ಹಾಗೂ ನೀರು ಹಾಕಿ ಮುಚ್ಚಳ ಹಾಕದೇ ಅರ್ಧದಷ್ಟು ಬೇಯಿಸಿಕೊಳ್ಳಿ.
* ಬಳಿಕ ಮ್ಯಾರಿನೇಟ್ ಮಾಡಿದ ಚಿಕನ್, ಕ್ಯಾಪ್ಸಿಕಮ್, ಸೋಯಾಸಾಸ್ ಹಾಕಿ, ಚಿಕನ್ ಸ್ಟಾಕ್ ಸೇರಿಸಿ ಮಿಶ್ರಣ ಮಾಡಿ.
* ಕುಕ್ಕರ್ ಮುಚ್ಚಳ ಮುಚ್ಚಿ, ಸೀಟಿ ಹಾಕದೇ 5-10 ನಿಮಿಷ ಬೇಯಿಸಿಕೊಳ್ಳಿ.
* ಅಕ್ಕಿ ಸಂಪೂರ್ಣವಾಗಿ ಬೆಂದಿದೆ ಎಂದು ಖಚಿತಪಡಿಸಿಕೊಂಡ ಬಳಿಕ ಜೇನು ತುಪ್ಪ, ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ