ಹುರಿದ ಮೊಟ್ಟೆ

ಬೇಯಿಸಿದ ಮೊಟ್ಟೆಯ ಸಿಪ್ಪೆ ತೆಗೆದು ಅದನ್ನು 2-3 ಹೋಳು ಮಾಡಿಕೊಳ್ಳಿ .ಎಣ್ಣೆಯನ್ನು ಬಿಸಿ ಮಾಡಿಕೊಂಡು ಮೊಟ್ಟೆಯನ್ನು ಅದರಲ್ಲಿ ನಿಧಾನವಾಗಿ ಕುದಿಸಿರಿ ಕುದಿಸುವಾಗ ಚಿಟಿಕೆಯಷ್ಟು ಅರಿಶಿನ ಮತ್ತು ಚಿಲ್ಲಿ ಪೌಡರ್ ಹಾಕಿ. ಅದು ಫ್ರೈ ಆದ ತಕ್ಷಣ ಅದನ್ನು ತೆಗೆದು ಇಡಿ. ಉಳಿದ ಅರಿಶಿನ ,ಮೆಣಸಿನ ಪುಡಿ ಮತ್ತು ಕಾಳುಮೆಣಸಿನಪುಡಿ ಹಾಗೂ ಚಿಕನ್ ಮಸಾಲಾಗಳನ್ನು ಸ್ವಲ್ಪ ನೀರು ಸೇರಿಸಿ ಪೇಸ್ಟ್‌ ಮಾಡಿಕೊಳ್ಳಿ. ಉಳಿದಿರುವ ಎಣ್ಣೆಯಲ್ಲಿ , ಈರುಳ್ಳಿ ಮತ್ತು ಶುಂಠಿಯನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ. ಈಗ ಪೇಸ್ಟ್ ಅನ್ನು ಸೇರಿಸಿ ಪುನಃ ಹುರಿಯಿರಿ.ತುಂಡು ಮಾಡಿದ ಟೊಮೆಟೊ ಸೇರಿಸಿ ,ಉಪ್ಪು ಸೇರಿಸಿ 6-8 ನಿಮಿಷ ಬೇಯಿಸಿ ಟೊಮೆಟೊ ಬೆಂದ ನಂತರ ಬೇಯಿಸಿದ ಮೊಟ್ಟೆಯನ್ನು ಅದಕ್ಕೆ ಸೇರಿಸಿ(ಅದು ಒಡೆಯದಂತೆ ನೋಡಿಕೊಳ್ಳಿ ) ಒಂದು ನಿಮಿಷ ಬೇಯಿಸಿ.

ವೆಬ್ದುನಿಯಾವನ್ನು ಓದಿ