ನಿವೃತ್ತಿಯ ಸುಳಿವು ನೀಡಿದ್ರಾ ಧೋನಿ..!

ಶನಿವಾರ, 20 ನವೆಂಬರ್ 2021 (20:09 IST)
ಚೆನ್ನೈ : ಟಿ20 ಕ್ರಿಕೆಟ್ನ ಸ್ಪೋಟಕ ಬ್ಯಾಟರ್ ಎಬಿ ಡಿವಿಲಿಯರ್ಸ್ ಅವರ ನಿವೃತ್ತಿ ಬೆನ್ನಲ್ಲೇ ಇದೀಗ ಮಹೇಂದ್ರ ಸಿಂಗ್ ಧೋನಿಯ ಅವರ ಮುಂದಿನ ನಡೆಯೇನು? ಎಂಬ ಚರ್ಚೆಗಳು ಶುರುವಾಗಿದೆ.
ಏಕೆಂದರೆ ಧೋನಿ ಮುಂದಿನ ಸೀಸನ್ ಐಪಿಎಲ್ ಮೂಲಕ ಕ್ರಿಕೆಟ್ ಅಂಗಳಕ್ಕೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಇದೀಗ ಧೋನಿ ನೀಡಿರುವ ಹೇಳಿಕೆಯೊಂದು ಮಹತ್ವ ಪಡೆದುಕೊಂಡಿದೆ. ಚೆನ್ನೈನಲ್ಲಿ ನಡೆದ ‘ದಿ ಚಾಂಪಿಯನ್ಸ್ ಕಾಲ್’ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಧೋನಿ, ನಾನು ಭಾರತದಲ್ಲಿ ನನ್ನ ಕೊನೆಯ ಏಕದಿನ ಪಂದ್ಯವನ್ನು ತವರಿನ ಪಿಚ್ ರಾಂಚಿ ಸ್ಟೇಡಿಯಂನಲ್ಲಿ ಆಡಿದ್ದೆ. ಹೀಗಾಗಿ ಟಿ20 ಕ್ರಿಕೆಟ್ನ ನನ್ನ ಕೊನೆಯ ಪಂದ್ಯವನ್ನು ಚೆನ್ನೈನಲ್ಲಿ ಆಡಲಿದ್ದೇನೆ ಎಂದು ತಿಳಿಸಿದ್ದಾರೆ.
“ನಾನು ಯಾವಾಗಲೂ ನನ್ನ ಕ್ರಿಕೆಟ್ ಜೀವನದ ಬಗ್ಗೆ ಪ್ಲ್ಯಾನ್ ಮಾಡಿಕೊಂಡಿದ್ದೇನೆ. ನನ್ನ ಕೊನೆಯ ತವರು ಏಕದಿನ ಪಂದ್ಯ ರಾಂಚಿಯಲ್ಲಿ ನಡೆದಿತ್ತು. ಇದೀಗ ನನ್ನ ಕೊನೆಯ ಖಿ20 ಪಂದ್ಯವು ಚೆನ್ನೈನಲ್ಲಿ ಆಡುವ ವಿಶ್ವಾಸವಿದೆ. ಆದರೆ ಅದು ಮುಂದಿನ ವರ್ಷವೋ ಅಥವಾ ಮುಂದಿನ ಐದು ವರ್ಷಗಳ ಬಳಿಕವೋ ಎಂಬುದು ನಿಜವಾಗಿಯೂ ತಿಳಿದಿಲ್ಲ” ಎಂದು ಧೋನಿ ಹೇಳಿದ್ದಾರೆ. ಈ ಮೂಲಕ ತಮ್ಮ ನಿವೃತ್ತಿ ಯಾವಾಗ ಎಂಬುದನ್ನು ಕೂಡ ಧೋನಿ ಮರೆಮಾಚುವ ಪ್ರಯತ್ನ ಮಾಡಿದ್ದಾರೆ.
ಬದಲಾಗಿ ಹರಾಜಿನಲ್ಲಿ ಹೆಸರು ನೋಂದಾಯಿಸಿ ತಂಡಕ್ಕೆ ಮರಳಲು ಬಯಸಿದ್ದಾರೆ. ಅವರ ಮೇಲೆ ಹೆಚ್ಚಿನ ಮೊತ್ತ ಹೂಡಿಕೆ ಮಾಡುವುದು ಬೇಡ ಎಂದಿದ್ದರು ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ಧೋನಿ ಮುಂದಿನ ಸೀಸನ್ನಲ್ಲಿ ನಿವೃತ್ತಿ ಘೋಷಿಸಲಿದ್ದಾರೆ ಎನ್ನಲಾಗಿತ್ತು. ಇದೀಗ ಚೆಪಾಕ್ ಮೈದಾನದಲ್ಲಿ ಕೊನೆಯ ಟಿ20 ಪಂದ್ಯವಾಡುವುದಾಗಿ ಧೋನಿ ತಿಳಿಸಿದ್ದಾರೆ. ಹೀಗಾಗಿ ಸಿಎಸ್ಕೆ ಜೆರ್ಸಿಯಲ್ಲಿ ಧೋನಿ ಕ್ರಿಕೆಟ್ ಬದುಕಿಗೆ ಗುಡ್ ಬೈ ಹೇಳಲು ಬಯಸಿದ್ದಾರೆ ಎಂಬುದು ಬಹಿರಂಗವಾಗಿದೆ. ಇದಾಗ್ಯೂ ಅವರು ಯಾವಾಗ ನಿವೃತ್ತಿ ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ