ಕ್ರೀಡಾಳುಗಳು ಸಿನಿಮಾದಲ್ಲಿ ಅಭಿನಯಿಸುವುದು ಹೊಸದೇನಲ್ಲ. ಪ್ರಖ್ಯಾತ ಬ್ಯಾಡ್ಮಿಂಟರ್ ತಾರೆಯರಾದ ಅಶ್ವಿನಿ ನಾಚಪ್ಪ, ಜ್ವಾಲಾ ಗುಟ್ಟಾ ಕೆಲ ದಿನಗಳ ಅಭಿನಯಿಸುವ ಮೂಲಕ ಸುದ್ದಿಯಲ್ಲಿದ್ದರು. ಈಗ ಅವರದೇ ಸಹ ಕ್ರೀಡಾಪಟು ಪಿ.ವಿ. ಸಿಂಧು ಬೆಳ್ಳಿತೆರೆಯಲ್ಲಿ ಮಿಂಚುವ ಮನೋಭಿಲಾಷೆಯನ್ನು ಹಂಚಿಕೊಂಡಿದ್ದಾರೆ.
ಕಳೆದ ಬಾರಿ ಸಿಂಧು ಪದ್ಮಶ್ರೀ ಪ್ರಶಸ್ತಿಯಿಂದ ಸನ್ಮಾನಿತರಾಗಿದ್ದ ಅವರು ಇತ್ತೀಚಿಗೆ ಮಲೇಶಿಯನ್ ಓಪನ್ ಪ್ರಶಸ್ತಿ ಗೆದ್ದಿದ್ದು, ಸದ್ಯದಲ್ಲಿ ಆರಂಭಗೊಳ್ಳಲಿರುವ ಸಯ್ಯದ್ ಮೋದಿ ಇಂಟರ್ ನ್ಯಾಶನಲ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ.