ಬೆಂಗಳೂರು : ಲಡ್ಡನ್ನು ಮಕ್ಕಳು ತುಂಬಾ ಇಷ್ಟಪಡುತ್ತಾರೆ. ಆದಕಾರಣ ಮಕ್ಕಳಿಗಾಗಿ ಅವಲಕ್ಕಿ ಲಡ್ಡನ್ನು ತಯಾರಿಸಿ ಕೊಡಿ.
ಮಾಡುವ ವಿಧಾನ : ಮೊದಲನೇಯದಾಗಿ ಅವಲಕ್ಕಿಯನ್ನು ಹುರಿದು ಮಿಕ್ಸಿಯಲ್ಲಿ ಪುಡಿಮಾಡಿಕೊಳ್ಳಿ. ಬಾಣಲೆಯಲ್ಲಿ ತುಪ್ಪ ಬಿಸಿ ತೆಂಗಿನ ತುರಿ ಕಂದು ಬಣ್ಣ ಬರುವವರೆಗೂ ಹುರಿಯಿರಿ. ಇದ್ನು ಕೂಡ ಮಿಕ್ಸಿಯಲ್ಲಿ ಬೆಲ್ಲ ಸೇರಿಸಿ ನೀರು ಹಾಕದೆ ಪುಡಿಮಾಡಿಕೊಳ್ಳಿ. ಅವಲಕ್ಕಿ ಮತ್ತು ತೆಂಗಿನತುರಿ ಪುಡಿ ಹಾಗೂ ಏಲಕ್ಕಿ ಪುಡಿ ಯನ್ನು ಮಿಶ್ರಣ ಮಾಡಿಕೊಳ್ಳಿ. ಅದಕ್ಕೆ ತುಪ್ಪ ಮತ್ತು ಹುರಿದ ಗೋಡಂಬಿ, ದ್ರಾಕ್ಷಿಯನ್ನು ಮಿಕ್ಸ್ ಮಾಡಿ ಲಾಡೂ ತಯಾರಿಸಿದರೆ ಅವಲಕ್ಕಿ ಲಡ್ಡು ರೆಡಿ.