ಬೀಟ್‍ರೂಟ್ ಬರ್ಫಿ (Beetroot Burfy)

ಸೋಮವಾರ, 15 ಅಕ್ಟೋಬರ್ 2018 (18:05 IST)
ನಾವು ದಿನನಿತ್ಯ ಅಡುಗೆಗೆ ಬಳಸುವ ಹಲವಾರು ತರಕಾರಿಗಳಲ್ಲಿ ಬೀಟ್‍ರೂಟ್ ಕೂಡಾ ಒಂದು ಇದರಿಂದ ಪಲ್ಲೆ ಸಾಂಬಾರ್ ಹೀಗೆ ಹಲವಾರು ಆಹಾರ ಪದಾರ್ಥವನ್ನು ಸಿದ್ಧಪಡಿಸುತ್ತಾರೆ ಅದರಲ್ಲೂ ಇದು ದೇಹ ಮತ್ತು ಹೃದಯದ ಆರೋಗ್ಯಕ್ಕೆ ಹೆಚ್ಚು ಸಹಾಯಕಾರಿ. ಅಂತಗ ಬೀಟ್‌ರೂಟ್ ಅಲ್ಲಿ ಬರ್ಫಿ ಮಾಡಿದರೆ ತುಂಬಾ ರುಚಿಕರವಾಗಿರುತ್ತದೆ ಅದನ್ನು ಹೇಗೆ ಮಾಡುವುದು ಎಂಬುದರ ಸಂಪೂರ್ಣ ವಿವರ ಇಲ್ಲಿದೆ
ಬೀಟ್‌ರೂಟ್ ತುರಿ- 1 ಬಟ್ಟಲು
ತೆಂಗಿನ ತುರಿ- ಅರ್ಧ ಬಟ್ಟಲು
ಸಕ್ಕರೆ- ಒಂದು ಬಟ್ಟಲು
ಹಸಿಶುಂಠಿ- ಒಂದು ಇಂಚು ಉದ್ದ
ತುಪ್ಪ- 3 ಚಮಚ
ಮೊಸರು- 3 ಚಮಚ
ಅಲಂಕರಿಸಲು (ಬೇಕಿದ್ದಲ್ಲಿ) ಗೋಡಂಬಿ
 
ಮಾಡುವ ವಿಧಾನ:
 
ಮೊದಲು ಒಂದು ಬೀಟ್‌ರೂಟ್ ಅನ್ನು ತುರಿದುಕೊಳ್ಳಿ ಅದಕ್ಕೆ ಅರ್ಧ ಬಟ್ಟಲು ಕಾಯಿ ತುರಿಯನ್ನು ಸಿದ್ಧಮಾಡಿಕೊಳ್ಳಿ. ಶುಂಟಿಯ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ. ನಂತರ ತುರಿದ ಬೀಟ್ ಮತ್ತು ಶುಂಟಿ ಸೇರಿಸಿ ಜಾರ್‌ನಲ್ಲಿ ಹಾಕಿ ಒಂದು ಸುತ್ತು ತಿರುಗಿಸಿಕೊಳ್ಳಿ. ಹಾಗೇ ಕಾಯಿಯನ್ನು ಹಾಕಿ ಕೇವಲ ಒಂದು ಸುತ್ತು ಬ್ಲೆಂಡ್ ಮಾಡಿಕೊಳ್ಳಿ. ಇದು ನುಣ್ಣಗಾಗಬಾರದು.
 
ನಂತರ ಗ್ಯಾಸ್ ಅನ್ನು ಹಚ್ಚಿ ಒಂದು ಪ್ಯಾನ್ ಇಡಿ ಅದಕ್ಕೆ ಈ ಬೀಟ್ರೂಟ್ ತುರಿ, ಕಾಯಿ ತುರಿ, ಮತ್ತು ಒಂದು ಬಟ್ಟಲು ಸಕ್ಕರೆಯನ್ನು ಹಾಕಿ ಒಟ್ಟುಗೂಡಿಸಿ, ಆಗಾಗ ಕೈ ಮಗುಚುತ್ತಿರಿ. ಹತ್ತು ನಿಮಿಷಗಳ ನಂತರ, ಅದರಲ್ಲಿನ ನೀರಿನಂಶವೆಲ್ಲಾ ಹೋಗಿ ಇನ್ನೇನು ಗಟ್ಟಿಯಾಗುತ್ತಾ ಇದೆ ಎನ್ನುವಾಗ ಅದಕ್ಕೆ ಎರಡು ಚಮಚ ಮೊಸರು ಹಾಕಿ. ಮತ್ತೆರಡು ನಿಮಿಷಕ್ಕೆ 2 ರಿಂದ 3 ಚಮಚ ತುಪ್ಪ ಹಾಕಿ ಬಿಡದೆ ಕೈ ಮಗುಚುತ್ತಿರಿ. 
 
ಅದು ಪೂರ್ತಿ ಗಟ್ಟಿಯಾಗಿ ತಳ ಬಿಟ್ಟುಕೊಂಡಾಗ (ಗಟ್ಟಿಯಾದ ಮುದ್ದೆ ರೂಪಕ್ಕೆ ಬರುತ್ತದೆ) ಅದನ್ನು ತುಪ್ಪ ಸವರಿದ ತಟ್ಟೆಗೆ ಹಾಕಿ. ಈಗ ದೋಸೆ ತೆಗೆಯುವ ಸೌಟನ್ನು ತೆಗೆದುಕೊಂಡು ಗಟ್ಟಿಯಾದ ಮುದ್ದೆಯನ್ನು ತಟ್ಟೆ ಪೂರ್ತಿ ಹರಡುವಂತೆ ಮಾಡಿ. ಸ್ವಲ್ಪ ತಣಿದಾಗ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ. ಅಲಂಕಾರಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿಯನ್ನು ಬಳಸಬಹುದು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ