ಮಾಡುವ ವಿಧಾನ:
* ಮೀನಿನ ತುಂಡುಗಳನ್ನು ಚೆನ್ನಾಗಿ ತೊಳೆದು ನಿಂಬೆರಸ, ಸ್ವಲ್ಪ ಅರಿಶಿಣ ಹಾಗೂ ಉಪ್ಪು ಹಾಕಿ ಮಿಕ್ಸ್ ಮಾಡಿ ಅರ್ಧ ಗಂಟೆ ಇಡಿ. ನಂತರ 2 ಚಮಚ ಸಾಸಿವೆಎಣ್ಣೆ ಹಾಕಿ ಅದರಲ್ಲಿ ಮೀನನ್ನು ಸ್ವಲ್ಪ ಫ್ರೈ ಮಾಡಿ, ಎಣ್ಣೆಯಿಂದ ತೆಗೆದು ತಟ್ಟೆಯಲ್ಲಿಡಿ.
* ನಂತರ ಪ್ಯಾನ್‌ಗೆ ಮತ್ತೆ ಎರಡು 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ, ಅದರಲ್ಲಿ ಸಾಸಿವೆ ಎಣ್ಣೆ, ಈರುಳ್ಳಿ ಬೀಜ, ಒಣ ಮೆಣಸು, ಲವಂಗದ ಎಲೆ ಹಾಕಿ ಸಾಸಿವೆ ಚಟಾಪಟಾ ಶಬ್ದ ಮಾಡುವಾಗ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ 1 ನಿಮಿಷ ಫ್ರೈ ಮಾಡಿ, ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
* ನಂತರ ಸಾಸಿವೆ ಪೇಸ್ಟ್ ಹಾಕಿ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ ಹಾಕಿ ಮಸಾಲೆಯಿಂದ ಎಣ್ಣೆ ಬೇರ್ಪಡುವವರೆಗೆ ಬೇಯಿಸಿ. ನಂತರ ಒಂದು ಕಪ್ ನೀರು ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ, ಕತ್ತರಿಸಿದ ಹಸಿ ಮೆಣಸು ಹಾಕಿ ಕುದಿಸಿ. ನಂತರ ಮೀನು ಹಾಕಿ ಮತ್ತೆ 5 ನಿಮಿಷ ಬೇಯಿಸಿ ನಂತರ ಉರಿಯಿಂದ ಇಳಿಸಿ ಅರ್ಧ ಅಥವಾ ಒಂದು(ಗಾತ್ರದ ಮೇಲೆ ಅವಲಂಭಿಸಿರುತ್ತದೆ) ನಿಂಬೆ ಹಣ್ಣಿನ ರಸ ಹಾಕಿದರೆ ಬೆಂಗಾಲಿ ಮೀನಿನ ಸಾರು ರೆಡಿ.