ಬ್ರೆಡ್ ಟೋಸ್ಟ್ ಮಾಡುವ ವಿಧಾನ

ಶುಕ್ರವಾರ, 7 ಆಗಸ್ಟ್ 2020 (07:27 IST)
ಬೆಂಗಳೂರು : ಬ್ರೆಡ್ ನಿಂದ ಹಲವು ಬಗೆಯ ತಿನಿಸುಗಳನ್ನು ಮಾಡಬಹುದು. ಅದು ರುಚಿಕರವಾಗಿರುತ್ತದೆ. ಆದಕಾರಣ ಬಹಳ ಸುಲಭವಾಗಿ ತಯಾರಾಗುವಂತಹ ಬ್ರೆಡ್ ಟೋಸ್ಟ್ ನ್ನು ತಯಾರಿಸಿ ತಿನ್ನಿ.

ಬೇಕಾಗುವ ಸಾಮಾಗ್ರಿಗಳು : ಬ್ರೆಡ್ 1 ಪೌಂಡ್, ಈರುಳ್ಳಿ 3, 1 ಕ್ಯಾರೆಟ್, 1 ಕ್ಯಾಪ್ಸಿಕಂ, 1 ಟೊಮೆಟೊ, ಕೊತ್ತಂಬರಿ ಸೊಪ್ಪು, ಜೀರಿಗೆ ಮತ್ತು ಕಾಳುಮೆಣಸಿನ ಪುಡಿ, 4 ಚಮಚ  ಎಣ್ಣೆ, ಚಾಟ್ ಮಸಾಲ 1ಚಮಚ, ಅರಶಿನ ಪುಡಿ ½ ಚಮಚ, ಖಾರದ ಪುಡಿ 1 ಚಮಚ, ಉಪ್ಪು.

ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಂ, ಟೊಮೆಟೊ, ಕೊತ್ತಂಬರಿ ಸೊಪ್ಪು, ಜೀರಿಗೆ ಮತ್ತು ಕಾಳುಮೆಣಸಿನ ಪುಡಿ, ಚಾಟ್ ಮಸಾಲ, ಅರಶಿನ ಪುಡಿ, ಖಾರದ ಪುಡಿ, ಉಪ್ಪು, ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬ್ರೆಡ್ ಗಳ ಮೇಲೆ ಹಾಕಿ ಓವಂ ನಲ್ಲಿ 10 ನಿಮಿಷ ಬಿಸಿ ಮಾಡಬೇಕು. ಆಗ ಬ್ರೆಡ್ ಟೋಸ್ಟ್ ರೆಡಿಯಾಗುತ್ತದೆ.   

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ