ಚಿಕ್ಕು ಹಲ್ವಾ

ಶನಿವಾರ, 15 ನವೆಂಬರ್ 2014 (15:11 IST)
ಎಂಟು ಸಿಹಿ ಚಿಕ್ಕುಗಳು, ಮುಕ್ಕಾಲು ಕಪ್ ಬಿಸಿ ಮಾಡಿದ ಹಾಲು, ಕಾಲು ಕಪ್ ಸಕ್ಕರೆ, 160 ಗ್ರಾಂ ತುರಿದ ಖೋಯಾ, ಒಂದು ಚಮಚ ತುಪ್ಪ, ಬಾದಾಮಿ.
 
ಮಾಡುವ ವಿಧಾನ- ಚಿಕ್ಕು ಹಣ್ಣುಗಳ ಸಿಪ್ಪೆ, ಬೀಜ ತೆಗೆದು ಸ್ವಚ್ಛ ಮಾಡಿ. ಬಾಣಲೆಯಲ್ಲಿ ಚಿಕ್ಕು ಹಣ್ಣಿನ ತಿರುಳನ್ನು ಹಾಕಿ. ಹಾಲು ಹಾಕಿ ಚೆನ್ನಾಗಿ ಕಲಕುತ್ತಲೇ ಕುದಿಸಿ. ಸ್ವಲ್ಪ ದಪ್ಪಗಾಗುತ್ತಾ ಬಂದಂತೆ ಖೋಯಾ ಹಾಕಿ ಮತ್ತೆ ಕುದಿಸುತ್ತಲೇ ಇರಿ. ಸಕ್ಕರೆ ಹಾಗೂ ತುಪ್ಪ ಹಾಕಿ. ಕಡಿಮೆ ಉರಿಯಲ್ಲಿ 2ರಿಂದ ನಾಲ್ಕು ನಿಮಿಷಗಳ ಕಾಲ ತಿರುವುತ್ತಲೇ ಬೇಯಲು ಬಿಡಿ. ನಂತರ ಕೆಳಗಿಳಿಸಿ ಬಾದಾಮಿಯಿದ ಅಲಂಕರಿಸಿ.

ವೆಬ್ದುನಿಯಾವನ್ನು ಓದಿ