ಜೋಳದ ಹಲ್ವಾ

ಶನಿವಾರ, 15 ನವೆಂಬರ್ 2014 (15:16 IST)
ಬೇಕಾಗುವ ಸಾಮಗ್ರಿ: 150 ಗ್ರಾಂ ಜೋಳ, ನಾಲ್ಕು ಚಮಚ ತುಪ್ಪ, ಅರ್ಧ ಕಪ್ ಹಾಲು, 1 ಕಪ್ ಸಕ್ಕರೆ, ಕಾಲು ಚಮಚ ಏಲಕ್ಕಿ ಪುಡಿ, 8ರಿಂದ 10 ಕೇಸರ ದಳ, ಎರಡು ಚಮಚ ಹೆಚ್ಚಿದ ಬಾದಾಮಿ ಹಾಗೂ ಪಿಸ್ತಾ, 10ರಿಂದ 12 ಹೆಚ್ಚಿದ ಹಾಗೂ ತುಪ್ಪದಲ್ಲಿ ಹುರಿದ ಗೋಡಂಬಿ.
 
ಮಾಡುವ ವಿಧಾನ: ನೀರು ಹಾಕದೆ ಜೋಳವನ್ನು ಮಿಕ್ಸರ್‌ನಲ್ಲಿ ಚೆನ್ನಾಗಿ ರುಬ್ಬಿ. ಒಂದು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಅದರಲ್ಲಿ ಈ ರುಬ್ಬಿದ ಜೋಳವನ್ು ಹುರಿಯಿರಿ. ಚಿನ್ನದ ಬಣ್ಣದ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ ಇದಕ್ಕೆ ಹಾಲು ಹಾಗೂ ಸಕ್ಕರೆ ಸೇರಿಸಿ. ಉರಿಯನ್ನು ಸಣ್ಣದಾಗಿಸಿ. ಹಾಗೇ ಬೇಯುತ್ತಿರಲಿ. ಆಗಾಗ ತಿರುವುತ್ತಿರಿ. ಕೊನೆಗೆ ಇದಕ್ಕೆ ಕೇಸರಿ, ಏಲಕ್ಕಿ ಪುಡಿ ಹಾಕಿ ತಿರುಗಿಸಿ. ಗೋಡಂಬಿ, ಪಿಸ್ತಾ, ಬಾದಾಮಿಯಿಂದ ಅಲಂಕರಿಸಿ ಬಿಸಿಬಿಸಿಯಾಗಿಯೇ ತಿನ್ನಲು ಕೊಡಿ.

ವೆಬ್ದುನಿಯಾವನ್ನು ಓದಿ