ರುಚಿಕರವಾದ ಕ್ಯಾರೆಟ್ ಉಪ್ಪಿನಕಾಯಿ

ಬುಧವಾರ, 10 ಅಕ್ಟೋಬರ್ 2018 (13:43 IST)
ಕ್ಯಾರೆಟ್ ಸಾಮಾನ್ಯವಾಗಿ ಎಲ್ಲಾ ಕಾಲದಲ್ಲಿಯೂ ಸಿಗುವಂತಹ ತರಕಾರಿಯಾಗಿದೆ. ಇದನ್ನು ಒಂದು ತರಕಾರಿಯ ಜೊತೆಗೆ ಬಳಸುವುದರಿಂದಲೂ ರುಚಿಯು ಇಮ್ಮಡಿಯಾಗುತ್ತದೆ. ಕ್ಯಾರೆಟ್‌ನಿಂದ ಬಗೆಬಗೆಯಾದ ಪದಾರ್ಥಗಳನ್ನು ತಯಾರಿಸಬಹುದು. ಅಂತಹುದರಲ್ಲಿ ಕ್ಯಾರೆಟ್ ಉಪ್ಪಿನಕಾಯಿಯೂ ಒಂದು. 
ತಯಾರಿಸಲು ಬೇಕಾಗುವ ಸಾಮಗ್ರಿಗಳು :
 
* 4 ರಿಂದ 5 ಕ್ಯಾರೆಟ್
* 1/2 ಚಮಚ ಮೆಂತ್ಯೆಕಾಳು
* 1 ಚಮಚ ಸಾಸಿವೆ
* ಸ್ವಲ್ಪ ಬೆಲ್ಲ
* 2 ನಿಂಬೆಹಣ್ಣು
* 1 ಚಮಚ ಜೀರಿಗೆ
* 1 ಚಮಚ ಅಚ್ಚಖಾರದ ಪುಡಿ
* ಶುಂಠಿ
* ಉಪ್ಪು
 
ಒಗ್ಗರಣೆಗೆ
* ಎಣ್ಣೆ
* ಸಾಸಿವೆ
* ಇಂಗು
* ಕರಿಬೇವು
* 1 ಒಣಮೆಣಸಿನಕಾಯಿ
 
ತಯಾರಿಸುವ ವಿಧಾನ :
 
  ಮೊದಲು ಕ್ಯಾರೆಟ್ ಮತ್ತು ಶುಂಠಿಯನ್ನು ಉದ್ದಕ್ಕೆ ಕಟ್ ಮಾಡಿ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ 5 ನಿಮಿಷ ಹುರಿಯಬೇಕು. ನಂತರ ಸಾಸಿವೆ, ಮೆಂತ್ಯೆಯನ್ನು ಹುರಿದುಕೊಳ್ಳಬೇಕು. ಅದಕ್ಕೆ ಅಚ್ಚಖಾರದ ಪುಡಿಯನ್ನು ಹಾಕಿ ಹುರಿಯಬೇಕು. ನಂತರ ಒಗ್ಗರಣೆಗಾಗಿ ಒಂದು ಪ್ಯಾನಲ್‌ನಲ್ಲಿ ಸಾಸಿವೆ, ಇಂಗು, ಕರಿಬೇವು, ಒಣಮೆಣಸಿನಕಾಯಿ ಹಾಕಿ ಹುರಿದು ಅದು ಆರಿದ ಮೇಲೆ ಈಗಾಗಲೇ ಹುರುದಿರುವ ಕ್ಯಾರೆಟ್, ಶುಂಠಿ ಮತ್ತು ಪುಡಿ ಮಾಡುದ ಮಸಾಲೆಯನ್ನು ಹಾಕಿ ಅದಕ್ಕೆ ಉಪ್ಪು, ಬೆಲ್ಲ, ನಿಂಬೆರಸವನ್ನು ಹಾಕಿ ಸರಿಯಾಗಿ ಮಿಶ್ರಣ ಮಾಡಿ ಅದು ಖಾರ ಬಿಡಲು ಸ್ವಲ್ಪ ಹೊತ್ತು ಬಿಡಬೇಕು. ಈಗ ಸಿದ್ಧವಾಗಿರುವ ಉಪ್ಪಿನಕಾಯಿಯು ಅನ್ನ, ಚಪಾತಿ, ದೋಸೆ ಜೊತೆ ನೆಂಜಿಕೊಳ್ಳಲು ರುಚಿಯಾಗಿರುತ್ತದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ