ಗರಿ ಗರಿಯಾದ ಕರಿಬೇವು ಸೊಪ್ಪಿನ ವಡೆ ಮಾಡುವ ವಿಧಾನ

ಶುಕ್ರವಾರ, 13 ಜನವರಿ 2017 (14:42 IST)
ಬೆಂಗಳೂರು: ಸಂಜೆ ಹೊತ್ತಿಗೆ ಟೀ, ಕಾಫಿ ಕುಡಿಯುವಾಗ ಜತೆಗೆ ಬಜ್ಜಿ ತಿನ್ನಲು ಎಲ್ಲರಿಗೂ ಇಷ್ಟ. ಅದಕ್ಕೇ ಕರಿಬೇವು ಸೊಪ್ಪಿನ ವಡೆ ಮಾಡುವ ವಿಧಾನ ಹೇಳುತ್ತೇವೆ ನೋಡಿಕೊಳ್ಳಿ.

ಬೇಕಾಗುವ ಸಾಮಗ್ರಿಗಳು

ಕರಿಬೇವಿನ ಸೊಪ್ಪು
ಸಣ್ಣ ರವೆ
ಕಡಲೆ ಹಿಟ್ಟು
ಜೀರಿಗೆ
ಖಾರದ ಪುಡಿ
ಉಪ್ಪು
ಕರಿಯಲು ಎಣ್ಣೆ

ಮಾಡುವ ವಿಧಾನ

ಕಡಲೆ ಹಿಟ್ಟು, ರವೆ, ಹೆಚ್ಚಿದ ಕರಿಬೇವಿನ ಎಲೆ, ಜೀರಿಗೆ, ಖಾರದ ಪುಡಿ, ಉಪ್ಪಿನ ಜತೆಗೆ ನೀರು ಹಾಕಿಕೊಂಡು ಕಲಸಿಕೊಳ್ಳಿ. ನಂತರ ಉಂಡೆ ಮಾಡಿಕೊಂಡು ವಡೆಯ ಆಕಾರಕ್ಕೆ ತಟ್ಟಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಕಾಯಲಿಟ್ಟು, ಕಾದ ನಂತರ ವಡೆಯನ್ನು ಬೇಯಿಸಿಕೊಳ್ಳಿ. ಕೆಂಪು ಬಣ್ಣ ಬರುವವರೆಗೆ ಹುರಿದು ನಂತರ ತೆಗೆದರೆ ಕರಿಬೇವು ಸೊಪ್ಪಿನ ವಡೆ ಸವಿಯಲು ಸಿದ್ಧ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ