ಸ್ವಾದಿಷ್ಠವಾದ ದಹಿ ಪುರಿ

ಶುಕ್ರವಾರ, 21 ಸೆಪ್ಟಂಬರ್ 2018 (17:46 IST)
ಬೇಕಾಗಿರುವ ಸಾಮಗ್ರಿ :
6 ಪುರಿ
1/2 ಬೇಯಿಸಿದ ಆಲೂ
1 ಕಪ್ ಮೊಸರು
1 ಟೀ ಚಮಚ ಸಕ್ಕರೆ
½ ಈರುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು)
½ ಚಿಕ್ಕದಾಗಿ ಹೆಚ್ಚಿದ ಟೊಮೆಟೊ
½ ಕಪ್ ಶೇವು
ಹುಣಸೆ ಹಣ್ಣಿನ ನೀರು
ನುಣ್ಣಗೆ ಅರೆದಿರುವ ಹಸಿ ಮೆಣಸಿನ ನೀರು
ಕಾಶ್ಮೀರಿ ಕಾರಾ ಪೌಡರ್
ಚಾಟ್ ಮಸಾಲಾ
ಉಪ್ಪು ರುಚಿಗೆ ತಕ್ಕಷ್ಟು
ಕೊತ್ತೊಂಬರಿ ಸೊಪ್ಪು ಸಣ್ಣಗೆ ಹೆಚ್ಚಿರುವುದು
 
ಮಾಡುವ ವಿಧಾನ: 
 
ಒಂದು ತಟ್ಟೆಯಲ್ಲಿ ಸಾಲಾಗಿ 6 ಪುರಿಯನ್ನು ಜೋಡಿಸಿಕೊಳ್ಳಿ. ಅದಕ್ಕೆ ಬೇಯಿಸಿದ ಆಲೂವನ್ನು ಎಲ್ಲಾ ಪುರಿಗಳಲ್ಲಿ ಹಾಕಿ. ಹಾಗೆಯೇ ಕಪ್‌ನಲ್ಲಿರುವ ಮೊಸರಿಗೆ 1 ಚಮಚ ಸಕ್ಕರೆಯನ್ನು ಹಾಕಿ ಚೆನ್ನಾಗಿ ಕಲೆಸಿ. ಅದನ್ನು ಒಂದು ಚಮಚದಲ್ಲಿ ಪುರಿಗೆ ಹಾಕಿ ನಂತರ ಅದಕ್ಕೆ ಚಿಕ್ಕದಾಗಿ ಕತ್ತರಿಸಿದ ಆಲೂ ಮತ್ತು ಟೊಮೆಟೊವನ್ನು ಹಾಕಿ. ಆ ಬಳಿಕ ಅದರ ಮೇಲೆ ಶೇವು ಹಾಕಿ ನಂತರ ಹುಣಸೆ ಹಣ್ಣಿನ ನೀರು ಮತ್ತು ನುಣ್ಣಗೆ ಅರೆದಿರುವ ಹಸಿ ಮೆಣಸಿನ ನೀರನ್ನು ಒಂದೊಂದು ಚಮಚ ಪ್ರತಿ ಪುರಿಯ ಮೇಲೂ ಹಾಕಿ ಅದರ ಮೇಲೆ ಚಾಟ್ ಮಸಾಲಾ, ಕಾಶ್ಮೀರಿ ಕಾರಾ ಪೌಡರ್, ಉಪ್ಪು ಮತ್ತು ಕತ್ತರಿಸಿದ ಕೊತ್ತೊಂಬರಿ ಸೊಪ್ಪನ್ನು ಹಾಕಿದರೆ ರುಚಿಕರವಾದ ದಹಿ ಪುರಿ ಸವಿಯಲು ಸಿದ್ಧ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ