ರುಚಿಕರವಾದ ಪನ್ನೀರ್ ಗ್ರೇವಿ

ಶುಕ್ರವಾರ, 21 ಸೆಪ್ಟಂಬರ್ 2018 (17:30 IST)
ಪನ್ನೀರ್ ಎಂದರೆ ಬಾಯಲ್ಲಿ ನೀರೂರುತ್ತದೆ. ಅದರಲ್ಲಿಯೂ ಪನ್ನೀರ್ ಗ್ರೇವಿಯು ತಿನ್ನಲು ರುಚಿಕರವಾಗಿಯೂ ಸುಲಭವಾಗಿಯೂ ಮಾಡಬಹುದು. ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು :
 
ಪನ್ನೀರ್ 500 ಗ್ರಾಂ ( 2 ಕಪ್)
ಹಸಿಮೆಣಸು 5 ರಿಂದ 6
ಮೆಣಸಿನ ಹುಡಿ 1/2 ಚಮಚ
ಅಕ್ಕಿ ಹುಡಿ 1 ಚಮಚ
ಕಾರ್ನ್ ಫ್ಲೋರ್ 2 ಚಮಚ
ಕೆಂಪು ಚಿಲ್ಲಿ ಸಾಸ್ 1 ಚಮಚ
ಸೋಯಾ ಸಾಸ್ 1 ಚಮಚ
ಈರುಳ್ಳಿ 1 ಕಪ್
ಗ್ರೀನ್ ಕ್ಯಾಪ್ಸಿಕಮ್ 1/2 ಕಪ್
ಬೆಳ್ಳುಳ್ಳಿ 1/2 ಚಮಚ
ಶುಂಠಿ 1/2 ಚಮಚ
ಲಿಂಬೆ ರಸ 1/2 ಚಮಚ
ಕೊತ್ತಂಬರಿ ಸೊಪ್ಪು 1/2 ಚಮಚ
ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
 
ಮಾಡುವ ವಿಧಾನ :
 
ಮೊದಲು ಸಣ್ಣ ಪಾತ್ರೆಯನ್ನು ತೆಗೆದುಕೊಂಡು ಅಕ್ಕಿ ಹುಡಿ, ಗರಂ ಮಸಾಲಾ, ಉಪ್ಪು ಮತ್ತು ನೀರನ್ನು ಸೇರಿಸಬೇಕು. ನಂತರ ಈರುಳ್ಳಿ, ಕ್ಯಾಪ್ಸಿಕಮ್, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಬಿಟ್ಟು ಉಳಿದ ಎಲ್ಲಾ ಸಾಮಗ್ರಿಗಳನ್ನು ಮಿಶ್ರ ಮಾಡಿಕೊಂಡು ಪನ್ನೀರ್ ತುಂಡುಗಳನ್ನು ಹಾಕಬೇಕು. ನಂತರ ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಪನ್ನೀರ್ ತುಂಡನ್ನು ಹಾಕಬೇಕು. ನಂತರ ಇನ್ನೊಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಇದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಹಾಕಬೇಕು.

ಅದಕ್ಕೆ ಕ್ಯಾಪ್ಸಿಕಮ್ ಅನ್ನು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಐದು ಹತ್ತು ನಿಮಿಷಗಳ ನಂತರ ಪಾತ್ರೆಗೆ ಹುರಿದ ಪನ್ನೀರ್ ಅನ್ನು ಹಾಕಬೇಕು. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ನಂತರ ಎಲ್ಲಾ ಸಾಮಗ್ರಿಗಳನ್ನು ಮಿಶ್ರ ಮಾಡಿಕೊಳ್ಳಬೇಕು. ಈಗ ಗ್ರೇವಿಯ ಮೇಲೆ ಲಿಂಬೆ ರಸವನ್ನು ಹಿಂಡಬೇಕು. ನಂತರ ಕೊತ್ತಂಬರಿ ಸೊಪ್ಪಿನಿಂದ ಗ್ರೇವಿಯನ್ನು ಅಲಂಕರಿಸಬಹುದು. ಈ ರುಚಿಕರವಾದ ಗ್ರೇವಿಯನ್ನು ಬಿಸಿ ಚಪಾತಿ, ರೋಟಿ ಮತ್ತು ಅನ್ನದೊಂದಿಗೆ ಸೇವಿಸಬಹುದು.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ