ಚಳಿಗಾಲಕ್ಕೆ ಬೆಚ್ಚಗಿನ ತಿನಿಸುಗಳು

ಶನಿವಾರ, 25 ನವೆಂಬರ್ 2017 (07:16 IST)
ಬೆಂಗಳೂರು: ಚಳಿಗಾಲದಲ್ಲಿ ವಾತಾವರಣದಲ್ಲಿ ಕಡಿಮೆ ತಾಪಮಾನ ಇರುವುದರಿಂದ ಮಾನವ ಶರೀರದ ಮೇಲೆ ಪರಿಣಾಮ ಬೀರುತ್ತದೆ. ವಿಪರೀತ ತಂಪಾದ ತಾಪಮಾನದಿಂದಾಗಿ ಶೀತ, ಕೆಮ್ಮವಿನಂತಹ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಚಳಿಗಾಲದಲ್ಲಿ ಬೆಚ್ಚಗೆ ಹಾಗೂ ಆರೋಗ್ಯವಾಗಿರಲು ಇಲ್ಲಿದೆ ಒಂದಿಷ್ಟು ತಿನಿಸುಗಳ ಪಟ್ಟಿ. ನೀವೊಮ್ಮೆ ಪ್ರಯತ್ನಿಸಿ ನೋಡಿ.


ಎಳ್ಳಿನ ಉಂಡೆ: ಎಳ್ಳು ಮತ್ತು ಬೆಲ್ಲ ಸೇರಿಸಿ ಮಾಡಿದ ಉಂಡೆಯನ್ನು ಸೇವಿಸಿ. ಇವೆರೆಡೂ ದೇಹದಲ್ಲಿ ಉಷ್ಣತೆಯ ಅಂಶವನ್ನು ಹೆಚ್ಚಿಸುತ್ತದೆ. ಎಳ್ಳಿನಲ್ಲಿ ಆಂಟಿಆಕ್ಸಿಡೆಂಟ್ ಅಂಶ ಜಾಸ್ತಿ ಇರುತ್ತದೆ. ಇನ್ನು ಬೆಲ್ಲ ಕಬ್ಬಿಣದಂಶದ ಕೊರತೆಯನ್ನು ನಿವಾರಿಸುತ್ತದೆ.


ಅಂಟಿನ ಉಂಡೆ: ಇದು ತಿನ್ನಬಹುದಾದ ಅಂಟಾಗಿರುವುದರಿಂದ ಚಳಿಗಾಲದಲ್ಲಿ ಈ ಅಂಟಿನಿಂದ ಮಾಡಿದ ಉಂಡೆ ತಿಂದರೆ ದೇಹಕ್ಕೆ ಬೇಕಾದ ಉಷ್ಣತೆ ದೊರಕುತ್ತದೆ. ಈ ಅಂಟಿಗೆ ಗೋಧಿ ಹಿಟ್ಟು, ಸಕ್ಕರೆ, ತುಪ್ಪ, ಮೆಲನ್ ಬೀಜ. ಬಾದಾಮಿ, ಏಲಕ್ಕಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಉಂಡೆ ಮಾಡಿಟ್ಟುಕೊಂಡರೆ ಚಳಿಗಾಲಕ್ಕೆ ಉತ್ತಮವಾದ ತಿನಿಸಾಗಿದೆ.


ಹಣ್ಣುಗಳು: ಸಾಧ್ಯವಾದಷ್ಟು ಕಿತ್ತಳೆ ಹಣ್ಣು, ಕ್ಯಾರೆಟ್, ಪೇರಳೆಹಣ್ಣನ್ನು ತಿನ್ನಿ. ಈ ಹಣ್ಣುಗಳಲ್ಲಿ ವಿಟಮಿನ್ ಸಿ ಮತ್ತು ಎ ಹೇರಳವಾಗಿರುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜತೆಗೆ ಕಣ್ಣಿನ ದೃಷ್ಟಿ ಹಾಗೂ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.


ಕಡಲೆ ಚಿಕ್ಕಿ: ಕಡಲೆಯು ದೇಹಕ್ಕೆ ಬೇಕಾದ ಉಷ್ಣಾಂಶವನ್ನು ನೀಡಿದರೆ ಬೆಲ್ಲ ಶಕ್ತಿಯನ್ನು ನೀಡುತ್ತದೆ. ಇವೆರಡನ್ನು ಸೇರಿಸಿ ಮಾಡಿದ ಚಿಕ್ಕಿ ತಿನ್ನುವುದರಿಂದ ಹಸಿವು ನೀಗುತ್ತದೆ ಜತೆಗೆ ಚಳಿಗಾಲದ ಬಾಯಿರುಚಿಗೆ ಉತ್ತಮವಾದ ತಿನಿಸಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ