ಬೆಂಗಳೂರು : ಚಪಾತಿ ಆರೋಗ್ಯಕ್ಕೆ ತುಂಬಾ ಉತ್ತಮವಾದುದು. ಚಪಾತಿಯನ್ನು ಗೋಧಿಯಿಂದ ತಯಾರಿಸುವುದರಿಂದ ಇದರಲ್ಲಿ ಕೊಬ್ಬನಾಂಶ ಕಡಿಮೆ ಇರುತ್ತೆ ಹಾಗೂ ಹಲವು ಖನಿಜಾಂಶಗಳನ್ನು ಒಳಗೊಂಡಿರುವ ಕಾರಣ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಈ ಚಪಾತಿಯಿಂದ ಸಿಗುತ್ತದೆ. ಆದಕಾರಣ ಚಪಾತಿಯಿಂದ ನೂಡೆಲ್ಸ್ ಮಾಡಿ.
ಬೇಕಾಗುವ ಸಾಮಾಗ್ರಿಗಳು : 5 ಚಪಾತಿ, ಈರುಳ್ಳಿ 2, ಹಸಿಮೆಣಸಿನ ಕಾಯಿ1, ¼ ಕಪ್ ಬೇಯಿಸಿದ ಬಟಾಣಿ, ಸೋಯಾ ಸಾಸ್ ಸ್ವಲ್ಪ, ತುರಿದ ಕ್ಯಾರೆಟ್ 1, ಕಾಳುಮೆಣಸಿನ ಪುಡಿ ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ, ಬೆಳ್ಳುಳ್ಳಿ 4 ಎಸಳು, ಸ್ವಲ್ಪ ಎಣ್ಣೆ, ಉಪ್ಪು.
ಮಾಡುವ ವಿಧಾನ : ಮೊದಲಿಗೆ ಚಪಾತಿಯನ್ನು ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಬೇಯಿಸಿದ ಬಟಾಣಿ, ತುರಿದ ಕ್ಯಾರೆಟ್ ಹಾಕಿ ಚಿನ್ನಾಗಿ ಫ್ರೈ ಮಾಡಿ. ಅದು ಬೆಂದ ನಂತರ ಹಸಿಮೆಣಸಿನಕಾಯಿ ಹಾಕಿ ಮತ್ತೆ ಚೆನ್ನಾಗಿ ಫ್ರೈ ಮಾಡಿ. ನಂತರ ಈ ಮಿಶ್ರಣಕ್ಕೆ ಕಾಳುಮೆಣಸಿನ ಪುಡಿ, ರುಚಿಗೆ ಬೇಕಾಗುವಷ್ಟು ಉಪ್ಪು, ಸೋಯಾ ಸಾಸ್ ಹಾಕಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಕತ್ತರಿಸಿಟ್ಟುಕೊಂಡ ಚಪಾತಿ ತುಂಡುಗಳನ್ನು ಹಾಕಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿದರೆ ರುಚಿ ರುಚಿಯಾದ ಚಪಾತಿ ನೂಡಲ್ಸ್ ಸವಿಯಲು ಸಿದ್ಧ.