ಕುಂದಾಪುರ ಶೈಲಿಯ ಚಿಕನ್ ಸುಕ್ಕಾ ಮಾಡುವುದು ಹೇಗೆ ಗೊತ್ತಾ?

ಗುರುವಾರ, 30 ಜುಲೈ 2020 (08:33 IST)
Normal 0 false false false EN-US X-NONE X-NONE

ಬೆಂಗಳೂರು : ಚಿಕನ್ ಎಂದರೆ ಎಲ್ಲರಿಗೂ ಪ್ರಿಯ. ಅದರಲ್ಲೂ ಕುಂದಾಪುರ ಶೈಲಿಯ ಚಿಕನ್ ಸುಕ್ಕಾ ಸವಿಯಲು ಬಹಳ ಸೊಗಸಾಗಿರುತ್ತದೆ. ಇದನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.
 

ಬೇಕಾಗುವ ಸಾಮಾಗ್ರಿಗಳು : 1ಕೆ.ಜಿ.ಕೋಳಿ ಮಾಂಸ, ಈರುಳ್ಳಿ 1, ಒಣಮೆಣಸು-8, ಕರಿಬೇವು, ಅರಿಶಿನಪುಡಿ ¼  ಚಮಚ, ಬೆಳ್ಳುಳ್ಳಿ-8 ಎಸಳು, ಕೊತ್ತಂಬರಿ ಕಾಳು-1 ಚಮಚ, ಜೀರಿಗೆ-1/2 ಚಮಚ, ಚಕ್ಕೆ-1  ತುಂಡು, ಏಲಕ್ಕಿ-1, ಲವಂಗ-2, ಎಣ್ಣೆ 3 ಚಮಚ, ಕಾಳುಮೆಣಸು-2 ಚಮಚ, ಹುಣಸೆಹಣ್ಣು, ತೆಂಗಿನ ತುರಿ 1 ಕಪ್.

ಮಾಡುವ ವಿಧಾನ : ಒಂದು ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಕರಿಬೇವು, ಈರುಳ್ಳಿ, ಬೆಳ್ಳುಳ್ಳಿ, ಅರಿಶಿನ ಪುಡಿ, ಉಪ್ಪು ಹಾಕಿ. ಅದಕ್ಕೆ ಕೋಳಿ ಮಾಂಸವನ್ನು ಹಾಕಿ ಬೇಯಿಸಿ. ಒಂದು ಬಾಣಲೆ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಕೊತ್ತಂಬರಿ, ಜೀರಿಗೆ, ಕಾಳುಮೆಣಸು, ಲವಂಗ, ಏಲಕ್ಕಿ, ಚಕ್ಕೆ ತುಂಡು ಹಾಕಿ ಪರಿಮಳ ಬರುವವರಗೆ ಚೆನ್ನಾಗಿ ಹುರಿದುಕೊಳ್ಳಿ. ಬಳಿಕ ಮೆಣಸು ಹಾಕಿ ಹುರಿದು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ಅದಕ್ಕೆ ತೆಂಗಿನ ತುರಿ, ಸ್ವಲ್ಪ ಈರುಳ್ಳಿ, ಹುಣಸೇಹಣ್ಣು ಹಾಕಿ ನಯವಾಗಿ ರುಬ್ಬಿಕೊಳ್ಳಿ. ಈ ಮಸಾಲೆಯನ್ನು ಬೆಂದ ಕೋಳಿ ಮಾಂಸಕ್ಕೆ ಹಾಕಿ ಉಪ್ಪು ಹಾಕಿ ಕುದಿಸಿದರೆ ಕುಂದಾಪುರ ಚಿಕನ್ ಸುಕ್ಕಾ ರೆಡಿ.

 

  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ