ಫ್ರೈಡ್‌ರೈಸ್ ಮಾಡುವುದು ಹೇಗೆ ಗೊತ್ತಾ?

ಗುರುವಾರ, 20 ಸೆಪ್ಟಂಬರ್ 2018 (18:09 IST)
ಈಗೀಗ ಹೋಟೆಲ್‌ಗಳಲ್ಲಿ ಸಾಮಾನ್ಯವಾಗಿ ಫ್ರೈಡ್‌ರೈಸ್‌ ಸಿಗುತ್ತದೆ. ಆದರೆ ಮನೆಗಳಲ್ಲೇ ನಾವು ಸುಲಭವಾಗಿ ಫ್ರೈಡ್‌ರೈಸ್ ಅನ್ನು ತಯಾರಿಸಿ ರುಚಿ ಸವಿಯಬಹುದು. ಹೇಗೆ ಅಂತೀರಾ..ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು :
 
ಬೀನ್ಸ್ 8 ರಿಂದ 10
ಕ್ಯಾರೆಟ್ 1 
ಕ್ಯಾಪ್ಸಿಕಮ್ 1
ಅಕ್ಕಿ 1  ಲೋಟ
ಸೋಯಾ ಸಾಸ್ 1 ಚಮಚ
ವಿನಿಗರ್ 1 ಚಮಚ
ಹಸಿ ಮೆಣಸು 3
ಪೆಪ್ಪರ್ ಪೌಡರ್ 1/2 ಚಮಚ
ಈರುಳ್ಳಿ 1
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು
 
ಮಾಡುವ ವಿಧಾನ :
 
ಮೊದಲು ಬೀನ್ಸ್, ಕ್ಯಾರೆಟ್ ಮತ್ತು ಕ್ಯಾಪ್ಸಿಕಮ್ ಅನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಈರುಳ್ಳಿ ಮತ್ತು ಹಸಿಮೆಣಸನ್ನು ಉದ್ದುದ್ದಕ್ಕೆ ಹೆಚ್ಚಿಕೊಳ್ಳಬೇಕು. ನಂತರ ಉದುರುದುರಾಗಿ ಅನ್ನವನ್ನು ಮಾಡಿ ಒಂದು ಬಾಣಲೆಗೆ ಎಣ್ಣೆ ಹಾಕಿ ಅದ ಬಿಸಿಯಾದ ಮೇಲೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ, ಹಸಿಮೆಣಸು ಮತ್ತು ಎಲ್ಲಾ ತರಕಾರಿಗಳನ್ನು ಹಾಕಿ ಉಪ್ಪು ಹಾಕಿ ಫ್ರೈ ಮಾಡಬೇಕು. ತರಕಾರಿಯು 80% ಬೆಂದ ಮೇಲೆ ವಿನಿಗರ್, ಸೋಯಾಸಾಸ್, ಪೆಪ್ಪರ್ ಪೌಡರ್ ಹಾಕಿ ಚೆನ್ನಾಗಿ ತೊಳೆಸಿ ಅನ್ನವನ್ನು ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ರುಚಿಯಾದ ಫ್ರೈಡ್‌ರೈಸ್ ಸವಿಯಲು ಸಿದ್ಧ. ಇದನ್ನು ಟೊಮೆಟೊ ಸಾಸ್ ಜೊತೆ ತಿಂದರೆ ಇನ್ನೂ ರುಚಿಯಾಗಿರುತ್ತದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ