ತಯಾರಿಸುವ ವಿಧಾನ :
ಮೊದಲು ಭಾಸುಮತಿ ಅಕ್ಕಿಯನ್ನು 20 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಬಾಣಲೆಗೆ 5 ಕಪ್ ನೀರನ್ನು ಹಾಕಿ ಆ ನೀರಿಗೆ ಉಪ್ಪು ಮತ್ತು ಎಣ್ಣೆಯನ್ನು ಹಾಕಿ ನೀರನ್ನು ಕುದಿಸಬೇಕು. ನಂತರ ನೆನೆಸಿದ ಅಕ್ಕಿಯ ನೀರನ್ನೂ ತೆಗೆದು ಕುದಿಯುತ್ತಿರುವ ನೀರಿಗೆ ಹಾಕಬೇಕು. ಅದನ್ನು 8 ರಿಂದ 10 ನಿಮಿಷ ಬೇಯಿಸಬೇಕು. ನಂತರ ಹೆಚ್ಚಿನ ನೀರನ್ನು ಜರಡಿಯನ್ನು ಉಪಯೋಗಿಸಿ ಬಸಿಯಬೇಕು.
ಇದನ್ನು ಮಾಡುವುದರಿಂದ ಅನ್ನ ಉದುರಾಗಿರುತ್ತದೆ. ನಂತರ ಬಾಣಲೆಗೆ 2 ಚಮಚ ತುಪ್ಪವನ್ನು ಹಾಕಿ ಅದು ಬಿಸಿಯಾದಾಗ ಅದಕ್ಕೆ ಜೀರಿಗೆಯನ್ನು ಹಾಕಿ ಹುರಿಯಬೇಕು. ನಂತರ ಅದಕ್ಕೆ ಅನ್ನವನ್ನು ಹಾಕಿ ಮಿಶ್ರಣ ಮಾಡಬೇಕು. ನಂತರ 1/4 ಚಮಚದಷ್ಟು ಉಪ್ಪನ್ನು ಹಾಕಿ ಮಿಶ್ರಣ ಮಾಡಬೇಕು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ರುಚಿಯಾದ ಸುಲಭವಾಗಿ ಮಾಡಬಹುದಾದ ಜೀರಾ ರೈಸ್ ಸವಿಯಲು ಸಿದ್ಧ. ಇದರೊಂದಿಗೆ ದಾಲ್ ಫ್ರೈಯನ್ನೂ ತಯಾರಿಸಿಕೊಂಡು ಸವಿದರೆ ಇನ್ನೂ ರುಚಿ ಜಾಸ್ತಿ..