ಗೋಡಂಬಿ ಖೀರು

ಶನಿವಾರ, 15 ನವೆಂಬರ್ 2014 (15:25 IST)
ಬೇಕಾಗುವ ಸಾಮಗ್ರಿ: ಮುನ್ನಾದಿನ ರಾತ್ರಿಯೇ ನೆನೆಹಾಕಿದ ಗೋಡಂಬಿ-  ಒಂದುವರೆ ಕಪ್, ಅರ್ಧ ಗ್ಯಾಲನ್ ಹಾಲು, ಎರಡು ಕಪ್ ಸಕ್ಕರೆ, ಅಲಂಕಾರಕ್ಕಾಗಿ ಐದರಿಂದ ಆರು ಬಾದಾಮಿ, ಒಣದ್ರಾಕ್ಷಿ, ಗೋಡಂಬಿ, ಸ್ವಲ್ಪ ಕೇಸರಿ ದಳ.
 
ನೆನೆಹಾಕಿದ ಗೋಡಂಬಿಯನ್ನು ಹೊರತೆಗದು ಅದನ್ನು ಚೆನ್ನಾಗಿ ರುಬ್ಬಿ. ಸ್ವಲ್ಪ ಹಾಲು ಸೇರಿಸಿ. ಪೇಸ್ಟ್ ತುಂಬ ನಯವಾಗಿರುವಂತೆ ರುಬ್ಬಿ. ಸ್ವಲ್ಪ ಕೇಸರಿ ದಳವನ್ನು ಸಣ್ಣ ಬೌಲ್‌ನಲ್ಲಿ ಹಾಕಿ ಅದಕ್ಕೆ ಸ್ವಲ್ಪ ಬಿಸಿ ಹಾಲು ಹಾಕಿ ಕರಗಿಸಿ ಪಕ್ಕಕ್ಕಿಡಿ. ಉಳಿದ ಹಾಲನ್ನು ದೊಡ್ಡ ಪಾತ್ರೆಯಲ್ಲಿ ತೆಗೆದುಕೊಂಡು ಬಿಸಿಯಾಗಲು ಒಲೆ ಮೇಲಿಡಿ. ಹಾಲು ಕುದಿದು ಕುದಿದು ಗಟ್ಟಿಯಾಗಲು ಶುರುವಾದ ಮೇಲೆ ಸಕ್ಕರೆ ಹಾಗೂ ಗೋಡಂಬಿ ಪೇಸ್ಟ್ ಸೇರಿಸಿ. ಇದನ್ನು ಚೆನ್ನಾಗಿ ಕಲಕುತ್ತಿರಿ. ಇಲ್ಲವಾದರೆ ಅದು ಗಟ್ಟಿಯಾಗುತ್ತದೆ. ಬೇಕಿದ್ದರೆ ಸಕ್ಕರೆ ಸೇರಿಸಿ ಕೆಳಗಿಳಿಸಿ. ಕೇಸರಿ ದಳದ ಹಾಲನ್ನು ಸೇರಿಸಿ ತಿರುವಿ. ತಣ್ಣಗಾಗಲು ಬಿಡಿ. ಫ್ರಿಡ್ಜ್‌ನಲ್ಲಿಟ್ಟು ತಣ್ಣಗಾದ ಮೇಲೆ ಬೌಲ್‌ನಲ್ಲಿ ಹಾಕಿ ತಿನ್ನಲು ಕೊಡಿ.

ವೆಬ್ದುನಿಯಾವನ್ನು ಓದಿ