ಬಾಯಲ್ಲಿ ನೀರೂರಿಸುವ ಕೊಂಕಣಿ ಶೈಲಿಯ ರುಚಿಕರ ಅಡುಗೆಗಳು

ಅತಿಥಾ

ಗುರುವಾರ, 14 ಡಿಸೆಂಬರ್ 2017 (17:54 IST)
ಕೊಂಕಣ ಪ್ರದೇಶವು ಪ್ರಾರಂಭದಿಂದಲೂ ಪಾಕ ವಿಧಾನದಲ್ಲಿ ತನ್ನದೇ ವಿಶೇಷ ಶೈಲಿಯನ್ನು ಹೊಂದಿದೆ. ಈ ಅಡುಗೆ ತಯಾರಿಕೆಯ ಶೈಲಿಗಳು ಹೆಚ್ಚಾಗಿ ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾದ ಸಂಪ್ರದಾಯಗಳಿಂದ ಪ್ರಭಾವಿತವಾಗಿದ್ದು ಮುಖ್ಯವಾಗಿ ಸಮುದ್ರದಲ್ಲಿ ದೊರೆಯುವ ಆಹಾರ ಪಧಾರ್ಥವನ್ನು ಬಳಸಿ ಅಡುಗೆ ಮಾಡುವುದು ಇಲ್ಲಿನ ದಿನಚರಿ. ಅಷ್ಟೇ ಅಲ್ಲ ಇಲ್ಲಿ ಶಾಖಹಾರಿ ಅಡುಗೆಗಳು ಸಹ ರುಚಿಯಲ್ಲಿ ಉಳಿದವುಗಳಿಗಿಂತ ವಿಭಿನ್ನವಾಗಿರುತ್ತದೆ.
 
ಕರಾವಳಿ ಕೊಂಕಣ ಪ್ರದೇಶದಲ್ಲಿ ಬಹಳ ಜನಪ್ರಿಯರಾಗಿರುವ ಕೆಲವು ವಿಶೇಷ ಕೊಂಕಣಿ ಪಾಕವಿಧಾನಗಳನ್ನು ತಿಳಿಯೋಣ...
1. ದಾಳಿ ತೋಯ್ (ದಾಲ್)
ದಾಳಿ ತೋಯ್ ಎಲ್ಲ ಕೊಂಕಣಿ ಜನರು ಅಡುಗೆ ಪ್ರಾರಂಭಿಸಿದಾಗ ಕಲಿತ ಮೊಟ್ಟಮೊದಲ ಪಾಕವಿಧಾನ ಇದಾಗಿದ್ದು ಮೆಣಸಿನಕಾಯಿ, ಶುಂಠಿ, ಇಂಗು ಮೊದಲಾದವುಗಳೊಂದಿಗೆ ಸರಳವಾಗಿ ತಯಾರಿಸುವ ದಾಲ್ ಇದಾಗಿದೆ. ಇದು ಬಹುತೇಕ ಎಲ್ಲಾ ಕೊಂಕಣಿ ಪ್ರದೇಶದಲ್ಲಿ, ಕಾರ್ಯಕ್ರಮದಲ್ಲಿ ಮತ್ತು ಉತ್ಸವಗಳಲ್ಲಿ ಹೆಚ್ಚಾಗಿ ತಯಾರಿಸುತ್ತಾರೆ.
 
ಬೇಕಾಗುವ ಸಾಮಗ್ರಿ
1 ಕಪ್ ತೊಗರಿ ಬೇಳೆ
3-4 ಹಸಿರು ಮೆಣಸಿನಕಾಯಿಗಳು
1 ಚಿಕ್ಕ ಶುಂಠಿ
ಒಂದು ಚಿಟಿಕೆ ಅರಿಶಿನ ಪುಡಿ
ಕೊತ್ತುಂಬರಿ ಸೋಪ್ಪು
2 ಟೀ ಚಮಚ ತುಪ್ಪ ಅಥವಾ ತೆಂಗಿನ ಎಣ್ಣೆ
½ ಟೀ ಚಮಚ ಸಾಸಿವೆ
½ ಟೀ ಚಮಚ ಜೀರಿಗೆ
1 ಕೆಂಪು ಮೆಣಸು
ಚಿಟಿಕೆ ಇಂಗು
4-5 ಒಗ್ಗರಣೆ ಸೋಪ್ಪು
ಉಪ್ಪು
 
ಮಾಡುವ ವಿಧಾನ-
ಅರಿಶಿನ, ಹಸಿರು ಮೆಣಸಿನಕಾಯಿ ಮತ್ತು ಸಣ್ಣದಾಗಿ ಕೊಚ್ಚಿದ ಶುಂಠಿಯೊಂದಿಗೆ ತೊಗರಿ ಬೇಳೆಯನ್ನು ಕುಕ್ಕರ್‌ನಲ್ಲಿ 3 ಸೀಟಿ ಬರುವವರೆಗೂ ಬೇಯಿಸಿ. ಅದಕ್ಕೆ ಉಪ್ಪು ಸೇರಿಸಿ. ಒಂದು ಬಾಣಲೆಯಲ್ಲಿ ತುಪ್ಪ ಅಥವಾ ಎಣ್ಣೆ ಹಾಕಿ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಒಗ್ಗರಣೆ ಸೋಪ್ಪು, ಕೆಂಪು ಮೆಣಸು, ಇಂಗು ಸೇರಿಸಿ ಒಗ್ಗರಣೆ ನೀಡಿ. ಇದಕ್ಕೆ ಬೇಯಿಸಿದ ದಾಲ್ ಮತ್ತು ಕೊತ್ತುಂಬರಿ ಸೋಪ್ಪು ಹಾಕಿದರೆ, ರುಚಿಕರವಾದ ಕೊಂಕಣಿ ಶೈಲಿಯ ದಾಳಿ ತೋಯ್ ರೆಡಿ.
 
 
2. ಸೋಯಿ ಪೋಳೋ (ಕಾಯಿ ದೋಸೆ)
 
ಬೇಕಾಗುವ ಸಾಮಗ್ರಿ
1 ಕಪ್ ಅಕ್ಕಿ (ದೋಸೆ ಅಕ್ಕಿ, ಇಲ್ಲದಿದ್ದರೆ ಯಾವುದೇ ಸಾಮಾನ್ಯ ಬೇಯಿಸದ ಅಕ್ಕಿ)
3/4 ಕಪ್ ತೆಂಗಿನಕಾಯಿ
ಉಪ್ಪು
 
ಮಾಡುವ ವಿಧಾನ-
 
ರಾತ್ರಿಯಿಡಿ ನೆನೆಸಿಟ್ಟ ಅಕ್ಕಿ ಮತ್ತು ತೆಂಗಿನಕಾಯಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ನಂತರ ಕಾದ ತವಾ ಮೇಲೆ ಎಣ್ಣೆಯನ್ನು ಸವರಿ, ರುಬ್ಬಿದ ಹಿಟ್ಟು ಹಾಕಿ ಒಂದು ಭಾಗ ಮಾತ್ರ ಬೇಯಿಸಿದರೆ ಸೋಯಿ ಪೋಳೋ (ನೀರ್ ದೋಸೆ) ಸವಿಯಲು ಸಿದ್ಧ.
 
3. ಬಂಗಡಾ ಮೀನು ಸಾಂಬಾರ್
 
ಬೇಕಾಗುವ ಸಾಮಗ್ರಿ
 1/2 ತೆಂಗಿನಕಾಯಿ ತುರಿ
ಹುಣಿಸೇಹಣ್ಣು - 1 ಸಣ್ಣ ತುಂಡು
ಸ್ವಲ್ಪ ಹುರಿದ ಕೆಂಪು ಮೆಣಸು- 8
ಶುಂಠಿ ಸ್ವಲ್ಪ
ಬೆಳ್ಳುಳ್ಳಿ 3 ಎಸಳು
ಸ್ವಲ್ಪ ಹುರಿದ ಕೋತ್ತಂಬರಿ ಕಾಳು
ಸ್ವಲ್ಪ ಅರಿಶಿನ ಪುಡಿ
ಉಪ್ಪು
ಈರುಳ್ಳಿ - 1.
ಹಸಿರು ಮೆಣಸಿನಕಾಯಿ- 2 
ತೆಂಗಿನ ಎಣ್ಣೆ - 2 ಟೀ ಚಮಚ
4 ಕತ್ತರಿಸಿರುವ ಬಂಗಡಾ ಮೀನು
 
ಮಾಡುವ ವಿಧಾನ-
 
ಮೀನಿಗೆ ಉಪ್ಪು ಮತ್ತು ಸ್ವಲ್ಪ ಅರಿಶಿನ ಹಚ್ಚಿ ಪಕ್ಕಕ್ಕೆ ಇರಿಸಿ.
 
ತೆಂಗಿನಕಾಯಿ ತುರಿ, ಹುಣಿಸೇಹಣ್ಣು ಮತ್ತು ಹುರಿದ ಕೆಂಪು ಮೆಣಸಿನಕಾಯಿ, ಹುರಿದ ಕೋತ್ತಂಬರಿ ಕಾಳು, ಈರುಳ್ಳಿ, ಶುಂಠಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
 
ಒಂದು ಬಾಣಲೆಯಲ್ಲಿ 2 ಟೀ ಚಮಚ ತೆಂಗಿನ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಅದಕ್ಕೆ ಜಜ್ಜಿರುವ ಬೆಳ್ಳುಳ್ಳಿ ಎಸಳನ್ನು ಹಾಕಿ ಹುರಿಯಿರಿ ನಂತರ ರುಬ್ಬಿದ ಮಸಾಲೆ ಹಾಕಿ, ಮೀನಿನ ತುಂಡುಗಳನ್ನು ಹಾಕಿ ಮತ್ತು ಸ್ವಲ್ಪ ನೀರನ್ನು ಸೇರಿಸಿ. ಅದನ್ನು 5 ರಿಂದ 7 ನಿಮಿಷಗಳವರೆಗೆ ಬೇಯಿಸಿದರೆ ಬಂಗಡಾ ಮೀನು ಸಾಂಬಾರ್ ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ