ಕರಿಬೇವಿನ ಸೊಪ್ಪು
ಎಣ್ಣೆ
ಮಾಡುವ ವಿಧಾನ-
ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಸಾಸಿವೆ, ಜೀರಿಗೆ, ಕರಿಬೇವು, ಕಡಲೆಬೇಳೆ, ಉದ್ದಿನಬೇಳೆ ಮತ್ತು ಹಸಿ ಮೆಣಸಿನಕಾಯಿಯನ್ನು ಸೇರಿಸಿ ಒಗ್ಗರಣೆ ಕೊಡಿ. ನಂತರ ಅದಕ್ಕೆ ಹೆಚ್ಚಿದ ಈರುಳ್ಳಿ, ಹೆಚ್ಚಿದ ಟೊಮೆಟೊ, ಉಪ್ಪು, ಸ್ವಲ್ಪ ಸಕ್ಕರೆ ಸೇರಿಸಿ ಚೆನ್ನಾಗಿ ಬಾಡಿಸಿ, ಚಿಕ್ಕದಾಗಿ ತುಂಡು ಮಾಡಿದ ಇಡ್ಲಿ ಹಾಕಿ ಹುರಿದು, ಅರ್ಧ ಲಿಂಬೆಯ ರಸ, ಸ್ವಲ್ಪ ತೆಂಗಿನ ತುರಿ, ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಬಾಡಿಸಿದರೆ ರುಚಿಯಾದ ಇಡ್ಲಿ ಉಪ್ಪಿಟ್ಟು ರೆಡಿ.
ಜೀರಿಗೆ
ಕರಿಬೇವಿನ ಸೊಪ್ಪು
ಎಣ್ಣೆ
ಮಾಡುವ ವಿಧಾನ-
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಸಾಸಿವೆ, ಜೀರಿಗೆ, ಕರಿಬೇವು, ಕಡಲೆಬೇಳೆ, ಉದ್ದಿನಬೇಳೆ ಮತ್ತು ಹಸಿ ಮೆಣಸಿನಕಾಯಿಯನ್ನು ಸೇರಿಸಿ ಒಗ್ಗರಣೆ ಕೊಡಿ. ನಂತರ ಅದಕ್ಕೆ ಹೆಚ್ಚಿದ ಈರುಳ್ಳಿ, ಹೆಚ್ಚಿದ ಟೊಮೆಟೊ, ಉಪ್ಪು, ಸ್ವಲ್ಪ ಸಕ್ಕರೆ,ಅರಿಶಿನ ಸೇರಿಸಿ ಚೆನ್ನಾಗಿ ಬಾಡಿಸಿ, ಬಿಸಿ ಮಾಡಿದ ಉಳಿದಿರುವ ಅನ್ನ ಹಾಕಿ ಬಾಡಿಸಿ, ಅರ್ಧ ಲಿಂಬೆಯ ರಸ, ಸ್ವಲ್ಪ ತೆಂಗಿನ ತುರಿ, ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಬಾಡಿಸಿದರೆ ರುಚಿಯಾದ ಚಿತ್ರನ್ನ ಸವಿಯಲು ಸಿದ್ಧ.