ಬಿಸಿ ಬಿಸಿಯಾದ ಅನ್ನಕ್ಕೆ ರುಚಿ ರುಚಿಯಾದ ನಿಂಬೆಹಣ್ಣಿನ ರಸಂ

ಶನಿವಾರ, 7 ಜುಲೈ 2018 (14:07 IST)
ಬೆಂಗಳೂರು:ಮಳೆಗಾಲದಲ್ಲಿ ಬಿಸಿಬಿಸಿ ಖಾರಖಾರವಾದ ಪದಾರ್ಥಗಳನ್ನು ತಿನ್ನಬೇಕು ಎಂಬ ಆಸೆ ಸಹಜವಾದದ್ದು. ಅದರಲ್ಲೂ ಬಿಸಿಬಿಸಿಯಾದ ಅನ್ನಕ್ಕೆ ರುಚಿಕರವಾದ ರಸಂ ಬಡಿಸಿಕೊಂಡು ತಿಂದರೆ ಆರೋಗ್ಯಕ್ಕೂ ಒಳ್ಳೆಯದ್ದು. ಮನಸ್ಸಿಗೂ ಹಿತ. ಇದು ನೆಗಡಿ, ಕೆಮ್ಮುವನ್ನು ಕೂಡ ಕಡಿಮೆಮಾಡುತ್ತದೆ.


ಸಾಮಾಗ್ರಿಗಳು
ತೊಗರಿಬೇಳೆ ½ ಕಪ್, ಕೊತ್ತಂಬರಿಸೊಪ್ಪು ಸ್ವಲ್ಪ, ಜೀರಿಗೆ ½ ಚಮಚ, ½ ಚಮಚ ಸಾಸಿವೆ, ಸ್ವಲ್ಪ ಕರಿಬೇವಿನ ಎಸಳು, ಚಿಟಿಕೆ ಎಂಗು, ಹಸಿಮೆಣಸು-2, ಉಪ್ಪು ರುಚಿಗೆ, ಬೆಲ್ಲ-1 ಚಮಚ, 3 ಚಮಚ-ನಿಂಬೆರಸ, ಅರಿಶಿನ ಚಿಟಿಕೆ.


ವಿಧಾನ
ಕುಕ್ಕರಿಗೆ ತೊಗರಿಬೇಳೆ ಸ್ವಲ್ಪ ನೀರು, ಅರಸಿನ ಹಾಕಿ ಬೇಯಿಸಿ. ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ ಸಾಸಿವೆ ಹಾಕಿ. ನಂತರ ಇಂಗು, ಹಸಿಮೆಣಸು, ಕರಿಬೇವು ಸೊಪ್ಪು ಹಾಕಿ. ಆಮೇಲೆ ಅದಕ್ಕೆ ಬೇಯಿಸಿದ ಬೇಳೇಯನ್ನು ಹಾಕಿ ಕುದಿಸಿ. ರುಚಿಗೆ ತಕ್ಕಷ್ಟು ಉಪ್ಪು ,ಬೆಲ್ಲ ಸೇರಿಸಿ ಕುದಿಸಿ. ನಂತರ ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿ. ಒಲೆಯಿಂದ ಕೆಳಗೆ ಇಳಿಸಿದ ನಂತರ ನಿಂಬೆಹಣ್ಣಿನ ರಸ ಸೇರಿಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ