ಮೆಂತ್ಯ ಸೊಪ್ಪಿನ ಪತ್ರೊಡೆ

ಶನಿವಾರ, 27 ಅಕ್ಟೋಬರ್ 2018 (16:01 IST)
ತಯಾರಿಸಲು ಬೇಕಾಗುವ ಸಾಮಗ್ರಿಗಳು :
 
 * ಅಕ್ಕಿ 3/4 ಕಪ್
* ಚಿಕ್ಕದಾಗಿ ಹೆಚ್ಚಿದ ಮೆಂತ್ಯ ಸೊಪ್ಪು ಒಂದೂವರೆ ಕಪ್
* ತೆಂಗಿನತುರಿ 1 ಕಪ್
* ನಿಂಬೆ ಹಣ್ಣು
* ಈರುಳ್ಳಿ 1 ಕಪ್
* ಧನಿಯಾ 2 ಟೀ ಚಮಚ
* ಜೀರಿಗೆ 2 ಟೀ ಚಮಚ
* ಕಡಲೆಬೇಳೆ 4 ಟೀ ಚಮಚ
* ಉದ್ದಿನಬೇಳೆ 4 ಟೀ ಚಮಚ
* ಸ್ವಲ್ಪ ಬೆಲ್ಲ
* ಮೆಣಸಿನಕಾಯಿ ಸ್ವಲ್ಪ
* ಸಾಸಿವೆ 1 ಟೀ ಚಮಚ
* ಅರಿಶಿನ 1/2 ಟೀ ಚಮಚ
* ಒಣಮೆಣಸಿನಕಾಯಿ 2
* ಕರಿಬೇವು
* ಎಣ್ಣೆ
 
ತಯಾರಿಸುವ ವಿಧಾನ :
 
ಮೊದಲು ಒಂದು ಬಟ್ಟಲಿನಲ್ಲಿ ಅಕ್ಕಿ, ಧನಿಯಾ, ಜೀರಿಗೆ, ಉದ್ದಿನಬೇಳೆ, ಕಡಲೇಬೇಳೆ, ಮೆಣಸಿನಕಾಯಿಯನ್ನು ನೀರು ಹಾಕಿ ಒಂದರಿಂದ ಒಂದೂವರೆ ಗಂಟೆ ನೆನೆಸಿಡಬೇಕು. ನಂತರ ಒಂದು ಮಿಕ್ಸಿ ಜಾರನ್ನು ತೆಗೆದುಕೊಂಡು ನೆನೆಸಿದ ಅಕ್ಕಿ, ಧನಿಯಾ, ಜೀರಿಗೆ, ಉದ್ದಿನಬೇಳೆ, ಕಡಲೆಬೇಳೆ ಮತ್ತು ಮೆಣಸಿನಕಾಯಿಯನ್ನು ಹಾಕಿ ಅದರೊಂದಿಗೆ ನಿಂಬೆರಸ, ತೆಂಗಿನಕಾಯಿ ತುರಿ, ಬೆಲ್ಲ ಮತ್ತು ಸ್ವಲ್ಪ ನೀರನ್ನು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು. ನಂತರ ಈ ಮಿಶ್ರಣಕ್ಕೆ ಮೆಂತ್ಯ ಸೊಪ್ಪನ್ನು ಹಾಕಬೇಕು. ಇದನ್ನು ಕುಕ್ಕರ್‌ನಲ್ಲಿ ವಿಷಲ್ ಹಾಕದೇ 1/2 ಗಂಟೆಯ ಕಾಲ ಬೇಯಿಸಬೇಕು. 
 
ಇದನ್ನು ಗ್ಯಾಸ್ ಇಂದ ಇಳಿಸಿ ಇದು ಆರಿದ ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ, ಕಡಲೇಬೇಳೆ, ಉದ್ದಿನಬೇಳೆ, ಒಣಮೆಣಸಿನಕಾಯಿ, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಕರಿಬೇವು, 1/2 ಟೀ ಚಮಚ ಅರಿಶಿನವನ್ನು ಹಾಕಿ ಒಗ್ಗರಣೆ ಮಾಡಿಕೊಳ್ಳಬೇಕು. ಈಗ ಬೇಯಿಸಿಕೊಂಡ ಮೆಂತ್ಯ ಸೊಪ್ಪಿನ ಮಿಶ್ರಣವನ್ನು ಚಿಕ್ಕದಾಗಿ ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ಒಗ್ಗರಣೆಯೊಂದಿಗೆ ಚೆನ್ನಾಗಿ ಮಿಶ್ರಣ ಮಾಡಬೇಕು. ಇದನ್ನು 5 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ ಸ್ವಲ್ಪ ತೆಂಗಿನಕಾಯಿ ತುರಿಯನ್ನು ಹಾಕಿ ಒಲೆಯಿಂದ ಇಳಿಸಿದರೆ ರುಚಿಯಾದ ಮೆಂತ್ಯ ಸೊಪ್ಪಿನ ಪತ್ರೊಡೆ ಸವಿಯಲು ಸಿದ್ಧ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ