ಅವಲಕ್ಕಿ ಖಾರ ಪೋಂಗಲ್

ಶುಕ್ರವಾರ, 2 ನವೆಂಬರ್ 2018 (16:00 IST)
ತಮಿಳುನಾಡಿನ ವಿಶೇಷ ತಿನಿಸುಗಳಲ್ಲಿ ಪೋಂಗಲ್ ಕೂಡಾ ಒಂದು ಎಂದು ಹೇಳಬಹುದು. ಅದರೆ ಅವಲಕ್ಕಿಯನ್ನೂ ಹಾಕಿ ಖಾರ ಪೋಂಗಲ್‌ನ್ನು ಕೂಡಾ ಸುಲಭವಾಗಿ ತಯಾರಿಸಬಹುದು. ನೀವೂ ಒಮ್ಮೆ ಟ್ರೈ ಮಾಡಿ ನೋಡಿ.. 
ಬೇಕಾಗುವ ಸಾಮಗ್ರಿಗಳು :
 
* ಅವಲಕ್ಕಿ 3 ಕಪ್
* ಹೆಸರುಬೇಳೆ 1 ಕಪ್
* ಹಾಲು 1 ಕಪ್
* ನೀರು 1 ಕಪ್
* ಗೋಡಂಬಿ 9 ರಿಂದ 10
* ಕರಿಮೆಣಸಿನ ಕಾಳು ಸ್ವಲ್ಪ
* ಹಸಿಮೆಣಸಿನಕಾಯಿ ಸ್ವಲ್ಪ
* ಕರಿಬೇವು
* ಇಂಗು
* 1 ಚಮಚ ತುಪ್ಪ
* ಅರಿಶಿನ
* ರುಚಿಗೆ ತಕ್ಕಷ್ಟು ಉಪ್ಪು
 
ತಯಾರಿಸುವ ವಿಧಾನ :
 
ಮೊದಲು ಹೆಸರುಬೇಳೆಗೆ ಅರಿಶಿನ ಮತ್ತು ಎಣ್ಣೆಯನ್ನು ಹಾಕಿ ಬೇಯಿಸಿಕೊಳ್ಳಬೇಕು. ಅದು ಬೆಂದ ನಂತರ ನೆನೆಸಿರುವ ಅವಲಕ್ಕಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ನಂತರ ಹದಕ್ಕೆ ತಕ್ಕಂತೆ ಹಾಲು ಮತ್ತು ನೀರನ್ನು ಬೆರೆಸಿ ಕುದಿಸಬೇಕು. ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ತುಪ್ಪವನ್ನು ಹಾಕಿ ಅದು ಬಿಸಿ ಆದ ಮೇಲೆ ಅದಕ್ಕೆ ಸಾಸಿವೆ, ಇಂಗು, ಮೆಣಸಿನಕಾಯಿ, ಕರಿಮೆಣಸಿನ ಕಾಳು, ಕರಿಬೇವು ಮತ್ತು ಗೋಡಂಬಿಯನ್ನು ಹುರಿದು ಬೆರೆಸಿದರೆ ಬಿಸಿಬಿಸಿಯಾದ ರುಚಿಯಾದ ಅವಲಕ್ಕಿ ಪೋಂಗಲ್ ಸವಿಯಲು ಸಿದ್ಧ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ