ಓಟ್ಸ್ ಉಪ್ಪಿಟ್ಟು

ಬುಧವಾರ, 10 ಅಕ್ಟೋಬರ್ 2018 (16:01 IST)
ತಯಾರಿಸಲು ಬೇಕಾಗುವ ಸಾಮಗ್ರಿಗಳು :
 
* 1 ಕಪ್ ಓಟ್ಸ್
* 1 ಕ್ಯಾರೆಟ್ (ಚಿಕ್ದಾಗಿ ಕತ್ತರಿಸಿಕೊಳ್ಳಬೇಕು)
* ಹುರುಳಿಕಾಯಿ 5-6 (ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು)
* ಬಟಾಣಿ ಸ್ವಲ್ಪ
* ಕರಿಬೇವು, ಕೊತ್ತಂಬರಿ ಸೊಪ್ಪು ಸ್ವಲ್ಪ
* 2 ಈರುಳ್ಳಿ
* ಶುಂಠಿ ಒಂದಿಂಚು
* ತೆಂಗಿನ ತುರಿ ಸ್ವಲ್ಪ (ಬೇಕಿದ್ದರೆ)
* ಒಂದೂವರೆ ಕಪ್ ನೀರು
* ರುಚಿಗೆ ತಕ್ಕಷ್ಟು ಉಪ್ಪು
* ಅರ್ಧ ನಿಂಬೆ ಹಣ್ಣು
* 1 ಚಮಚ ಸಾಸಿವೆ
* 1 ಚಮಚ ಕಡಲೆಬೇಳೆ ಮತ್ತು ಉದ್ದಿನಬೇಳೆ
* 1/2 ಚಮಚ ಜೀರಿಗೆ 
* 2 ಚಮಚ ಎಣ್ಣೆ ಅಥವಾ ತುಪ್ಪ
* 1/2 ಚಮಚ ಅರಿಶಿನ
ತಯಾರಿಸುವ ವಿಧಾನ :
 
  ಮೊದಲು ಬಾಣಲೆಯಲ್ಲಿ ಓಟ್ಸ್ ಅನ್ನು ಹಾಕಿ ಚೆನ್ನಾಗಿ ಹುರಿಯಬೇಕು. ನಂತರ 1  ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಜೀರಿಗೆ, ಅರಿಶಿನ, ಕರಿಬೇವು ಮತ್ತು ಈರುಳ್ಳಿಯನ್ನು ಹಾಕಿ ಕೆಂಬಣ್ಣ ಬರುವವರೆಗೆ ಹುರಿಯಬೇಕು. ನಂತರ ಕ್ಯಾರೆಟ್, ಹುರುಳಿಕಾಯಿ, ಬಟಾಣಿಯನ್ನು ಬೇಯಿಸಿಕೊಳ್ಳಬೇಕು. ನಂತರ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದು ಕುದಿದ ನಂತರ ಬೆಂದ ತರಕಾರಿಗಳನ್ನು ಹಾಕಿ ನಂತರ ಓಟ್ಸ್ ಹಾಕಿ ಮಿಶ್ರಣ ಮಾಡಿ. ಅದಕ್ಕೆ ನಿಂಬೆರಸ, ಉಪ್ಪು ಹಾಕಿ 5 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಬೇಕು. ಬೆಂದ ನಂತರ ತೆಂಗಿನ ತುರಿಯನ್ನು (ಬೇಕಿದ್ದರೆ) ಸೇರಿಸಬೇಕು. ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಆರೋಗ್ಯಕರವಾದ ಓಟ್ಸ್ ಉಪ್ಪಿಟ್ಟು ಸವಿಯಲು ಸಿದ್ಧ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ