ಅನಾನಸ್ ಕೇಸರಿಬಾತ್

ಶುಕ್ರವಾರ, 24 ಜುಲೈ 2020 (08:33 IST)
ಬೆಂಗಳೂರು : ಅನಾನಸ್ ಹಣ್ಣುಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಮಕ್ಕಳು ಕೆಲವೊಮ್ಮೆ ಹಣ್ಣನ್ನು ಹಾಗೇ ತಿನ್ನಲು ಇಷ್ಟಪಡುವುದಿಲ್ಲ.ಅದಕ್ಕಾಗಿ ಅನಾನಸ್ ನಿಂದ ಕೇಸರಿಬಾತ್ ತಯಾರಿಸಿ ಕೊಡಿ.

ಬೇಕಾಗುವ ಸಾಮಾಗ್ರಿಗಳು : ರವಾ 1 ಕಪ್, ಹಾಲು 1 ಕಪ್, ಸಕ್ಕರೆ 1 ಕಪ್, ಅನಾನಸ್ 1 ಕಪ್(ಅನಾನಸ್ ನ್ನು ಸಿಪ್ಪೆ ತೆಗೆದು ಸಣ್ಣಗೆ ಕತ್ತಿರಿಸಿಟ್ಟುಕೊಳ್ಳಿ), ತುಪ್ಪ 1 ಚಮಚ, ಏಲಕ್ಕಿ ಪುಡಿ ½ ಚಮಚ, ಕೇಸರಿ ಸ್ವಲ್ಪ, ಗೋಡಂಬಿ ಸ್ವಲ್ಪ, ದ್ರಾಕ್ಷಿ ಸ್ವಲ್ಪ.

ಮಾಡುವ ವಿಧಾನ : ಮೊದಲಿಗೆ ತುಪ್ಪ ಹಾಕಿ ರವಾವನ್ನು ಹುರಿದುಕೊಳ್ಳಿ. ಇನ್ನೊಂದು ಬಾಣಲೆಯಲ್ಲಿ ಅನಾನಸ್ ಪೀಸ್ ಹಾಗೂ ಸಕ್ಕರೆ  ಹಾಕಿ ಚೆನ್ನಾಗಿ 5 ನಿಮಿಷ ಕುದಿಸಿಟ್ಟುಕೊಳ್ಳಿ, ಮತ್ತೊಂದು ಪಾತ್ರೆಯಲ್ಲಿ ಹುರಿದಿಟ್ಟುಕೊಂಡ ರವಾ ಹಾಕಿ ಸ್ವಲ್ಪ ಹಾಲು ಮತ್ತು ನೀರನ್ನು ಹಾಕಿ ಬಿಸಿ ಕುದಿಸಿ. ಇದಕ್ಕೆ ಸಕ್ಕೆರೆ ಹಾಕಿ ಕುದಿಸಿಟ್ಟುಕೊಂಡ ಅನಾನಸ್ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅದಕ್ಕೆ ಏಲಕ್ಕಿ ಪುಡಿ ಹಾಗೂ ಕೇಸರಿಯನ್ನು ಹಾಕಿ 5 ನಿಮಿಷ ಬೇಯಲು ಬಿಡಿ. ನಂತರ ಅದಕ್ಕೆ  ಗೋಡಂಬಿ, ದ್ರಾಕ್ಷಿ ಹಾಕಿ ಮಿಕ್ಸ್ ಮಾಡಿದರೆ ಅನಾನಸ್ ಕೇಸರಿಬಾತ್ ಸವಿಯಲು ಸಿದ್ಧ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ