ಮೋಹಕ ಮೋಹನ ಲಾಡಿನ ಮಾಡಿ ನೋಡಿ

ಶುಕ್ರವಾರ, 30 ಡಿಸೆಂಬರ್ 2016 (13:49 IST)
ಬೆಂಗಳೂರು: ಹೆಸರೇ ಮೋಹಕವಾಗಿದೆ. ಮಾಡಿ ತಿಂದರೆ ಎಷ್ಟು ರುಚಿಯಾಗಿರುತ್ತದೆ ಎಂದು ನೋಡಬೇಕಾದರೆ, ಮೋಹನ ಲಾಡು ಒಮ್ಮೆ ಮಾಡಿ ನೋಡಿ.

 
ಬೇಕಾಗುವ ಸಾಮಗ್ರಿಗಳು

ಮೈದಾ ಹಿಟ್ಟು
ಸಕ್ಕರೆ
ತುಪ್ಪ
ಗೋಡಂಬಿ
ದ್ರಾಕ್ಷಿ
ಏಲಕ್ಕಿ

ಮಾಡುವ ವಿಧಾನ

ಮೈದಾ ಹಿಟ್ಟನ್ನು 4 ಚಮಚ ತುಪ್ಪ, ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಇದನ್ನು ಚಪಾತಿಯಂತೆ ಲಟ್ಟಿಸಿ ತುಪ್ಪದಲ್ಲಿ ಗರಿ ಗರಿಯಾಗಿ ಕರಿದಿಟ್ಟುಕೊಳ್ಳಿ. ಇನ್ನೊಂದು ಬಾಣಲೆಯಲ್ಲಿ ಸಕ್ಕರೆ ಪಾಕಕ್ಕಿಟ್ಟು, ನೂಲು ಪಾಕ ಮಾಡಿಕೊಳ್ಳಿ. ಕರಿದ ಚಪಾತಿಯನ್ನು ಪುಡಿ ಮಾಡಿ ಸಕ್ಕರೆ ಪಾಕಕ್ಕೆ ಹಾಕಿ. ಇದಕ್ಕೆ ದ್ರಾಕ್ಷಿ, ಗೋಡಂಬಿ, ಏಲಕ್ಕಿ ಹಾಕಿ ತಿರುವಿ ಇಡಿ. ಇದು ಸ್ವಲ್ಪ ತಣ್ಣಗಾದ ಮೇಲೆ ಉಂಡೆ ಕಟ್ಟಿದರೆ ಮೋಹನ ಲಾಡು ಸಿದ್ಧ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ