ಪಾಲಕ್ ಸೊಪ್ಪಿನಿಂದೂ ಪತ್ರೊಡೆ ಮಾಡಬಹುದು!

ಸೋಮವಾರ, 26 ಡಿಸೆಂಬರ್ 2016 (10:31 IST)
ಬೆಂಗಳೂರು: ಕರಾವಳಿಗರ ಮೆಚ್ಚಿನ ತಿಂಡಿ ಪತ್ರೊಡೆ. ಇದನ್ನು ಮಾಡಲು ಕೆಸುವಿನ ಎಲೆಯೇ ಬೇಕೆಂದಿಲ್ಲ. ಪಾಲಕ್ ಎಲೆಯಿಂದಲೂ ಮಾಡಬಹುದು. ಅದು ಹೇಗೆ ನೋಡೋಣ.


ಬೇಕಾಗುವ ಸಾಮಗ್ರಿಗಳು
ಪಾಲಕ್ ಸೊಪ್ಪು
ಧನಿಯಾ
ಕೆಂಪು ಮೆಣಸು
ಉದ್ದಿನ ಬೇಳೆ
ಮೆಂತೆ
ಅರಸಿನ ಪುಡಿ
ಹುಳಿ
ಕುಚ್ಚಿಲು ಅಕ್ಕಿ
ಬಾಳೆ ಎಲೆ
ಉಪ್ಪು

ಮಾಡುವ ವಿಧಾನ

ಕುಚ್ಚಿಲು ಅಕ್ಕಿಯನ್ನು ನೆನೆ ಹಾಕಿ. ಪಾಲಕ್ ಎಲೆಯನ್ನು ಸಣ್ಣಗೆ ಹಚ್ಚಿಟ್ಟುಕೊಳ್ಳಿ. ನೆನೆದ ಅಕ್ಕಿಯ ಜತೆ ಧನಿಯಾ, ಮೆಂತೆ,  ಉದ್ದಿನ ಬೇಳೆ, ಅರಸಿನ ಪುಡಿ,  ಹುಳಿ, ಕೆಂಪು ಮೆಣಸು, ಉಪ್ಪು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಸೊಪ್ಪು ಸೇರಿಸಿ ಬಾಳೆ ಎಲೆಯ ಮೇಲೆ ಹರಡಿಕೊಂಡು ಮಡಚಿ ಹಬೆಯಲ್ಲಿ ಬೇಯಿಸಿ.  ಈಗ ಪಾಲಕ್ ಸೊಪ್ಪಿನ ಪತ್ರೊಡೆ ರೆಡಿ. ಇದನ್ನು ಹುಡಿ ಮಾಡಿಕೊಂಡು ಒಗ್ಗರಣೆ ಮಾಡಿ ತಿನ್ನಲು ರುಚಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ