ಸಕ್ಕರೆ ಹೋಳಿಗೆ

ಶನಿವಾರ, 15 ನವೆಂಬರ್ 2014 (12:58 IST)
ಬೇಕಾಗುವ ಸಾಮಾಗ್ರಿ- 1 ಬಟ್ಟಲು ತೆಂಗಿನ ತುರಿ, ಒಂದು ಬಟ್ಟಲು ಒಣ ಕೊಬ್ಬರಿ ತುರಿ, ಒಂದು ಬಟ್ಟಲು ಸಕ್ಕರೆ.
 
ಮಾಡುವ ವಿಧಾನ- ಏಲಕ್ಕಿ, ಕೊಬ್ಬರಿ, ಸಕ್ಕರೆಯನ್ನು ಮಿಕ್ಸಿಯಲ್ಲಿ ಸಣ್ಣಗೆ ಪುಡಿ ಮಾಡಿ ಇಟ್ಟುಕೊಳ್ಳಿ. ತೆಂಗಿನ ತುರಿಯನ್ನು ನೀರು ಹಾಕದೆ ಸಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಂಡ ತೆಂಗಿನ ತುರಿಗೆ ಕೊಬ್ಬರಿ, ಸಕ್ಕರೆ ಪುಡಿಯನ್ನು ಸೇರಿಸಿ ಕಲಸಿಕೊಂಡರೆಹೂರಣ ರೆಡಿಯಾಗುತ್ತದೆ. ಶೇಂಗಾ ಹೋಳಿಗೆಗೆ ಕಲಸಿದ ರೀತಿಯಲ್ಲಿ ಕಣಕದ ಹಿಟ್ಟು ತಯಾರು ಮಾಡಿಕೊಂಡು ಹೂರಣ ಇಟ್ಟು ತೆಳುವಾಗಿ ಹೋಳಿಗೆ ಮಾಡಿರಿ. ಘಮಘಮಿಸುವ ಬಿಳಿ ಬಿಳಿ ಸಕ್ಕರೆ ಹೋಳಿಗೆ ರೆಡಿ.  

ವೆಬ್ದುನಿಯಾವನ್ನು ಓದಿ