ಬೆಂಗಳೂರು :ಸೌತೆಕಾಯಿ ಆರೋಗ್ಯಕ್ಕೆ ಉತ್ತಮ. ಅದು ದೇಹಕ್ಕೆ ತಂಪು ನೀಡುತ್ತದೆ. ಈ ಸೌತೆಕಾಯಿಯಿಂದ ಗೊಜ್ಜು ತಯಾರಿಸುವುದು ಹೇಗೆಂದು ತಿಳಿಯೋಣ.
ಬೇಕಾಗುವ ಸಾಮಾಗ್ರಿಗಳು : 1 ಸೌತೆಕಾಯಿ, ¾ ಕಪ್ ತುರಿದ ತೆಂಗಿನಕಾಯಿ, 4 ಹಸಿಮೆಣಸಿನ ಕಾಯಿ, ½ ಚಮಚ ಬೆಲ್ಲ, ಸಾಸಿವೆ, ಹುಣಸೆ ರಸ, ಉಪ್ಪು, ಕೊತ್ತಂಬರಿ ಸೊಪ್ಪು, 1 ಚಮಚ ಹುರಿಗಡಲೆ, 2 ಚಮಚ ಎಣ್ಣೆ, ಚಿಟಿಕೆ ಇಂಗು,
ಮಾಡುವ ವಿಧಾನ : ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದರಲ್ಲಿ ತೆಂಗಿನಕಾಯಿ, ಹಸಿಮೆಣಸಿನ ಕಾಯಿ, ಸಾಸಿವೆಯನ್ನು ಹುರಿದುಕೊಂಡು ಬಳಿಕ ಇವುಗಳ ಜೊತೆಗೆ ಕೊತ್ತಂಬರಿ ಸೊಪ್ಪು, ಉಪ್ಪು, ಬೆಲ್ಲ, ಹುರಿಗಡಲೆ, ಹುಣಸೆರಸ, ನೀರನ್ನು ಸೇರಿಸಿ ರುಬ್ಬಿಕೊಳ್ಳಿ. ಬಳಿಕ ಇದನ್ನು ಸೌತೆಕಾಯಿ ಜೊತೆ ಸೇರಿಸಿ. ಬಳಿಕ ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ, ಇಂಗ್ ಒಗ್ಗರಣೆ ಹಾಕಿ ಅದನ್ನು ಸೌತೆಕಾಯಿ ಮಿಶ್ರಣಕ್ಕೆ ಸೇರಿಸಿದರೆ ಸೌತೆಕಾಯಿ ಗೊಜ್ಜು ರೆಡಿ.