ಈರುಳ್ಳಿ ಚಟ್ನಿಯ ಸವಿ ನೋಡಿದ್ದೀರಾ..?

ಗುರುವಾರ, 1 ಮಾರ್ಚ್ 2018 (06:42 IST)
ಬೆಂಗಳೂರು: ಈರುಳ್ಳಿ ಚಟ್ನಿ ಆರೋಗ್ಯಕ್ಕೂ ಹಿತಕರ ಮಾಡುವುದಕ್ಕೂ ಸುಲಭ. ಇದನ್ನು ದೋಸೆ, ಇಡ್ಲಿ, ಅನ್ನದ ಜತೆ ಕೂಡ ಸೇವಿಸಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ.


ಈರುಳ್ಳಿ-1 ದೊಡ್ಡದ್ದು
ಟೊಮೆಟೊ-1/2
ಎಣ್ಣೆ-1 ಟೀ ಚಮಚ
ಒಣ ಕೆಂಪುಮೆಣಸು-5-6
ಬೆಳ್ಳುಳ್ಳಿ-4 ಎಸಳು
ಜೀರಿಗೆ-1/2 ಚಮಚ
ಹುಳಿ-1 ಟೀ ಚಮಚ
ಉಪ್ಪು-ರುಚಿಗೆ ತಕ್ಕಷ್ಟು
ನೀರು-2-3 ಚಮಚ


ಈರುಳ್ಳಿ ಹಾಗೂ ಟೊಮೆಟೋವನ್ನು ಚಿಕ್ಕಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಜೀರಿಗೆ ಒಣಮೆಣಸು, ಬೆಳ್ಳುಳ್ಳಿ, ಈರುಳ್ಳಿ  ಹಾಕಿ ಹುರಿಯಿರಿ. ಇದು ತಣ್ಣಗಾದ ನಂತರ ಟೊಮೆಟೊ, ಹುಳಿ, ಉಪ್ಪು, ನೀರು ಸೇರಿಸಿ  ಚೆನ್ನಾಗಿ ರುಬ್ಬಿ.


ಒಗ್ಗರಣೆಗೆ
ಒಂದು ಪಾತ್ರೆಗೆ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಸಿದ್ಧಪಡಿಸಿ ಇದನ್ನು ರುಬ್ಬಿಕೊಂಡ ಮಿಶ್ರಣಕ್ಕೆ ಹಾಕಿದರೆ ಈರುಳ್ಳಿ ಚಟ್ನಿ ರೆಡಿ..


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ