ಖರ್ಜೂರ ಹಲ್ವಾ ಮಾಡುವ ವಿಧಾನ

ಶುಕ್ರವಾರ, 17 ಜುಲೈ 2020 (10:04 IST)
ಬೆಂಗಳೂರು : ಖರ್ಜೂರ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಹಲ್ವಾವನ್ನು ಕೂಡ ತಯಾರಿಸಬಹುದು. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಬೇಕಾಗುವ ಸಾಮಾಗ್ರಿಗಳು : 2 ಕಪ್ ಖರ್ಜೂರ, 1 ಕಪ್ ಬಿಸಿ ನೀರು, ½ ಕಪ್ ತುಪ್ಪ, ¼ ಚಮಚ ಏಲಕ್ಕಿ ಪುಡಿ, 2 ಚಮಚ ಕಾರ್ನ್ ಪ್ಲೋರ್, 10 ಗೋಡಂಬಿ.

ಮಾಡುವ ವಿಧಾನ : ಖರ್ಜೂರವನ್ನು ಬಿಸಿ ನೀರಿನಲ್ಲಿ 30 ನಿಮಿಷ ನೆನೆಹಾಕಿ. ಬಳಿಕ ಅದರಿಂದ ಪೇಸ್ಟ್ ತಯಾರಿಸಿಕೊಳ್ಳಿ. ಅದಕ್ಕೆ ತುಪ್ಪ ಮಿಕ್ಸ್ ಮಾಡಿ 15 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ. ಬಳಿಕ ಇದಕ್ಕೆ  ಕಾರ್ನ್ ಪ್ಲೋರ್ ನ್ನು ನೀರಿನೊಂದಿಗೆ ಮಿಕ್ಸ್ ಮಾಡಿ ಸೇರಿಸಿ ಚೆನ್ನಾಗಿ ಬೇಯಿಸಿ.  ಅದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಏಲಕ್ಕಿ ಪುಡಿಯನ್ನು ಮಿಕ್ಸ್ ಮಾಡಿ ನಂತರ ತುಪ್ಪ ಸವರಿದ ಪಾತ್ರೆಗೆ ಸುರಿದು ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ